Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ದ್ವಿತೀಯ ಪಿಯುಸಿಯಲ್ಲಿ ಅವಳಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಎಕ್ಸಲೆಂಟ್ ಪಿಯು ಕಾಲೇಜು ವಿಜ್ಞಾನ ವಿಭಾಗದ ಅವಳಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದಲ್ಲದೇ, ಇಬ್ಬರೂ ಪಿಸಿಎಂಬಿ ಕಾಂಬಿನೆಷನಲ್ಲಿ ಒಂದೇ ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.

ಶಂಕರನಾರಾಯಣದ ವಿದ್ಯಾರ್ಥಿಗಳಾದ ಉದಿತಾ ಕಾಮತ್ ಎಂ. ಹಾಗೂ ಹರ್ಷಿತ್ ಕಾಮತ್ ಎಂ ಈ ಸಾಧನೆಗೈದ ಅವಳಿ ವಿದ್ಯಾರ್ಥಿಗಳು. ಉದಿತಾ ಶೇ.93.8 ಫಲಿತಾಂಶ ಪಡೆದುಕೊಂಡಿದ್ದರೇ, ಹರ್ಷಿತ್ ಶೇ.93.4 ಫಲಿತಾಂಶ ಪಡೆದುಕೊಂಡಿದ್ದಾರೆ. ಪಿಸಿಎಂಬಿಯಲ್ಲಿ ಇಬ್ಬರೂ 375 ಅಂಕ ಗಳಿಸಿರುವುದು ವಿಶೇಷ.

ಶಂಕರನಾರಾಯಣದ ಕಾಮತ್ ಶ್ರೀ ಹರಿ ಮೆಡಿಕಲ್ಸ್ʼನ ಎಂ. ಉದಯ ಕಾಮತ್ ಹಾಗೂ ಎಂ. ಗಾಯತ್ರಿ ಕಾಮತ್ ದಂಪತಿಗಳ ಮಕ್ಕಳಾಗಿರುವ ಅವಳಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ತೋರುತ್ತಲೇ ಬಂದಿದ್ದಾರೆ.

Exit mobile version