Site icon Kundapra.com ಕುಂದಾಪ್ರ ಡಾಟ್ ಕಾಂ

ಸಮುದಾಯ ಕುಂದಾಪುರ ರಂಗ ರಂಗು ರಜಾ ಮೇಳ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಬಾಲ್ಯವು ಒಂದು ಅಮೂಲ್ಯ ಸಂಪತ್ತಿನಂತೆ ಇದನ್ನು ಪ್ರತಿಕ್ಷಣವೂ ಸಂಭ್ರಮಿಸಬೇಕು ಎಂದು ರಂಗ ನಿರ್ದೇಶಕರಾದ ಡಾ ಶ್ರೀಪಾದ ಭಟ್ ಅವರು ಹೇಳಿದರು.

ಅವರು ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ) ಕುಂದಾಪುರ ಸರಕಾರಿ ಮತ್ತು ವಲಸೆ ಕಾರ್ಮಿಕರ ಮಕ್ಕಳಿಗಾಗಿ ಆಯೋಜಿಸಿದ ಉಚಿತ ರಂಗ ರಂಗು ಬೇಸಿಗೆ ರಜಾ ಮೇಳವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ವಿವಿಧ ಕಥೆ ಕವನಗಳನ್ನು ವಿಸ್ತರಿಸುತ್ತಾ ಇಲ್ಲಿ ಹತ್ತು ದಿನಗಳ ಕಾಲ ವೈವಿಧ್ಯಮಯ ಚಟುವಟಿಕೆಗಳು ನಾಟಕ ಪ್ರದರ್ಶನ ಇತ್ಯಾದಿಗಳು ಇದ್ದು ಮಕ್ಕಳು ಇಲ್ಲಿನ ಎಲ್ಲಾ ಸೃಜನಶೀಲ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ಇವರು ಹಮ್ಮಿಕೊಂಡಿರುತ್ತಾರೆ. ರಂಗ ನಿರ್ದೇಶಕ ವಾಸುದೇವ ಗಂಗೇರ ಮೇಳದ ನಿರ್ದೇಶಕರಾಗಿದ್ದಾರೆ. 80ಕ್ಕೂ ಹೆಚ್ಚು ಮಕ್ಕಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ

ಸಂಪನ್ಮೂಲ ವ್ಯಕ್ತಿಗಳಾಗಿ ಚಿನ್ನ ವಿ ಗಂಗೇರ, ರೋಹಿತ್ ಬೈಕಾಡಿ, ಗಣೇಶ ಶೆಟ್ಟಿ, ಕೆ ಎಂ ಹೊಸೇರಿ, ಮನೋಹರ ಮಣಿಪಾಲ, ಬಾಲಕೃಷ್ಣ ಕೆ ಎಂ, ಉತ್ಕಲ, ತಿಮ್ಮಪ್ಪ ಗುಲ್ವಾಡಿ, ವಿಕ್ರಮ ಕುಂದಾಪುರ, ಸಂದೇಶ ಕುಂದಾಪುರ, ಶಂಕರ್ ಅನಗಳ್ಳಿ, ನರಸಿಂಹ ಎಚ್, ಚಂದ್ರಶೇಖರ ವಿ,ಶ್ರಾವ್ಯ ಮುಂತಾದವರು ಭಾಗವಹಿಸಲಿದ್ದಾರೆ

ಉಚಿತ ರಜಾ ಮೇಳದಲ್ಲಿ ಮಣ್ಣಿನೊಂದಿಗೆ ಆಟ ಕಾಗದ ಕತ್ತರಿ ಆಟ, ಆಕಾಶ ವೀಕ್ಷಣೆ, ಟೆಲಿಸ್ಕೋಪ್ ಬಗ್ಗೆ ಮಾಹಿತಿ, ರಂಗಾಟಗಳು ನಟನೆ, ಅಭಿನಯ, ನಾಟಕ, ಮಕ್ಕಳ ಸಂತೆ, ಗಾಳಿಪಟ ಉತ್ಸವ, ಅಗ್ನಿ ಶಮನ ಪ್ರಾತ್ಯಕ್ಷಿಕೆ ಹೀಗೆ ಹತ್ತು ಹಲವು ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ

ಮೇಳದ ಸ್ವಯಂಸೇವಕರಾಗಿ ಲಂಕೇಶ್, ಸತ್ಯನ್,ಶೋಧನ್, ದಕ್ಷ, ಶ್ರೇಯಾ ಲಕ್ಷ್ಮಣ್, ಮುಂತಾದವರು ನಿರ್ವಹಿಸಲಿದ್ದಾರೆ.

ವೇದಿಕೆಯಲ್ಲಿ ಸಮುದಾಯ ಕುಂದಾಪುರದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರು ಶಿಬಿರ ನಿರ್ದೇಶಕರಾದ ವಾಸುದೇವ ಗಂಗೇರ ಅಕ್ಷರ ಸಾಂಸ್ಕೃತಿಕ ಸಂಘಟನೆಯ ರವಿ ವಿಎಂ ಉಪಸ್ಥಿತರಿದ್ದರು. ಡಾ ಸದಾನಂದ ಬೈಂದೂರು ಪ್ರಸ್ತಾವಿಕ ಮಾತಿನೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Exit mobile version