Kundapra.com ಕುಂದಾಪ್ರ ಡಾಟ್ ಕಾಂ

ಜೆ.ಇ.ಇ ಮೈನ್ಸ್: ಕ್ರಿಯೇಟಿವ್ ಕಾಲೇಜಿಗೆ ಉತ್ತಮ ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್ಸ್‌) ಅಂತಿಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ದುರ್ಗಾಶ್ರೀ ಎಮ್ 99.1312779, ನೇಹಾ ಕೆ ಉದಪುಡಿ 98.9485981, ಪ್ರಣವ್ ಟಿ ಎಮ್ 98.6313992, ಆದಿತ್ಯ ಅಲಗೌಡ ಪಾಟೀಲ್ 98.5573008, ಯುವರಾಜ್ ಬಿ ಕೆ 98.287914, ಅಕುಲ್ ಕೃಷ್ಣ ಎಮ್ ಎಸ್ 98.0229479, ಪಾರ್ಥ ಎ ಬಿ 98.0229479 ಪರ್ಸಂಟೈಲ್ ಗಳಿಸಿರುತ್ತಾರೆ. ಈ ಮೂಲಕ ಪರೀಕ್ಷೆ ಬರೆದ 441 ವಿದ್ಯಾರ್ಥಿಗಳಲ್ಲಿ 126 ವಿದ್ಯಾರ್ಥಿಗಳು ಮುಂಬರುವ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ.

ಈ ಎಲ್ಲಾ ವಿದ್ಯಾರ್ಥಿಗಳು ಎನ್.ಐ.ಟಿ ಅಂತಹ ಸಂಸ್ಥೆಗಳಲ್ಲಿ ಬಿ.ಇ ಪದವಿಗೆ ಪ್ರವೇಶ ಪಡೆಯುವ ಅವಕಾಶದ ಜೊತೆಗೆ ಐ.ಐ.ಟಿ ಸಂಸ್ಥೆ ಸೇರಲು ಮಾನದಂಡವಾಗಿರುವ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುತ್ತಾರೆ.

ಜೆ.ಇ.ಇ (ಮೈನ್ಸ್) ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಜೆ.ಇ.ಇ ಸಂಯೋಜಕರಾದ ನಂದೀಶ್ ಹೆಚ್. ಬಿ ರವರು ಶ್ಲಾಘಿಸಿದ್ದಾರೆ.

Exit mobile version