Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಮಾರಿಕಲ್ಲು ಬೆಟ್ಟು, ಶ್ರೀ ಮಾರಿಕಾಂಬಾ ದೇವಸ್ಥಾನದ ಪ್ರಥಮ ವರ್ಷದ ವರ್ಧ್ಯಂತ್ಯೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮರವಂತೆ ಮಾರಿಕಲ್ಲುಬೆಟ್ಟು, ಶ್ರೀ ಮಾರಿಕಾಂಬಾ ಹಾಗೂ ಸಹ ಪರಿವಾರ ದೇವರುಗಳ ಸಾನ್ನಿಧ್ಯದಲ್ಲಿ ವಾರ್ಷಿಕ ವರ್ಧ್ಯಂತ್ಯೋತ್ಸವದ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಇತ್ತಿಚಿಗೆ ಜರುಗಿತು.

ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸತೀಶ್ ನಾಯಕ್ ನಾಡರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರವಂತೆ ಮಾರಿಕಲ್ಲುಬೆಟ್ಟು ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ , ಕದಂ ದುಬೈನ ಶೀನ ದೇವಾಡಿಗ ಮರವಂತೆ ಯವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ, ಮರವಂತೆ ಮಾರಿಕಲ್ಲುಬೆಟ್ಟು ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ರಾಜು ದೇವಾಡಿಗ ತ್ರಾಸಿ, ಶೀನ ದೇವಾಡಿಗ ಮರವಂತೆ, ಮರವಂತೆ ಶ್ರೀ ರಾಮಮಂದಿರ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷರಾಗಿರುವ ವಾಸುದೇವ ಖಾರ್ವಿಯವರು ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

ಈ ಸಂದರ್ಭ ದೇಗುಲದ ಜೀರ್ಣೋದ್ದಾರಕ್ಕೆ ಸಹಕರಿಸಿದ 7 ಜನ ಮಹನೀಯರನ್ನು ಹಾಗೂ ವಿಜ್ಞಾನ ವಿಭಾಗದಲ್ಲಿ ಮರವಂತೆಗೆ ಟಾಪರ್ ಆಗಿರುವ ವಿದ್ಯಾರ್ಥಿನಿಯನ್ನು ದೇಗುಲದ ವತಿಯಿಂದ ಸನ್ಮಾನಿಸಲಾಯಿತು.

ನಾರಾಯಣ ದೇವಾಡಿಗರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಿಕಾ & ಮಾಧ್ಯಮ ವೃತ್ತಿ ನಿರತರಾದ ಶಯದೇವಿಸುತೆ ಮರವಂತೆ (ಜ್ಯೋತಿ ಎಸ್ ಡಿ.)ರವರು ಸಂಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿದರು. ಮಹೇಶ್ ದೇವಾಡಿಗ ಹಟ್ಟಿಯಂಗಡಿಯವರು ಸ್ವಾಗತಿಸಿ ದರು.

ಬಳಿಕ ಸ್ಥಳೀಯ ಪ್ರತಿಭಾವಂತ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ನೃತ್ಯ ವೈವಿಧ್ಯಮಯ ಕಾರ್ಯಕ್ರಮ ಜರುಗಿತು.

Exit mobile version