ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀ ಸೇನೇಶ್ವರ ದೇವಸ್ಥಾನದ ಸಮೀಪ ತತ್ವಂ ಚೈಲ್ಡ್ ಕೇರ್ ಸೆಂಟರ್ ಶುಭಾರಂಭಗೊಂಡಿತು.
ಕುಂದಾಪುರದ ಶ್ರೀದೇವಿ ನರ್ಸಿಂಗ್ ಹೋಮ್ ಇದರ ಮುಖ್ಯಸ್ಥರಾದ ಡಾ. ರವೀಂದ್ರ ರಾವ್ ಹಾಗೂ ಡಾ. ಭವಾನಿ ರವೀಂದ್ರ ರಾವ್ ರವರು ದೀಪ ಬೆಳಗಿಸಿ ಮೂಲಕ ತತ್ವಂ ಚೈಲ್ಡ್ ಕೇರ್ ಸೆಂಟರ್‌ನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಳೆದ 20 ವರ್ಷಗಳಿಂದ ಮಕ್ಕಳ ಆರೈಕೆ ಹಾಗೂ ಚಿಕಿತ್ಸೆಯಲ್ಲಿ ಕುಂದಾಪುರ ನಗರದ ಮನೀಷ್ ಆಸ್ಪತ್ರೆ ಹಾಗೂ ಶ್ರೀದೇವಿ ನರ್ಸಿಂಗ್ ಹೋಮ್‌ನಲ್ಲಿ ಮಕ್ಕಳ ತಜ್ಞೆಯಾಗಿ ಸೇವೆ ಸಲ್ಲಿಸಿದ ಡಾ. ರಶ್ಮೀ ಎಸ್ ಉಡುಪ (ಎಂ.ಡಿ.ಪಿಡಿಯಾಟ್ರಿಕ್ಸ್) ರವರು ನೂತನ ಕ್ಲಿನಿಕ್‌ನಲ್ಲಿ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಸೇವೆಗೆ ಲಭ್ಯರಿದ್ದಾರೆ