Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡ ವೇದಿಕೆ ಕುಂದಾಪುರ: ನವೆಂಬರ್ ತಿಂಗಳು ಪೂರ್ತಿ ಮಾರ್ದನಿಸಲಿದೆ ಕನ್ನಡ ‘ಡಿಂಡಿಮ’

[quote font_size=”14″ color=”#ff1000″ bgcolor=”#ffffff” bcolor=”#f9e900″ arrow=”yes” align=”right”]ನವೆಂಬರ್ 1 ರ ಭಾನುವಾರದ ಕಾರ್ಯಕ್ರಮ:
ಸಂಜೆ 4.00 ರಿಂದ ಪುರಮೆವಣಿಗೆ ನಂತರ ಬಸ್ರೂರು ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ರಸೋಲ್ಲಾಸದ ಬಳಿಕ ಸಂಜೆ 5.00 ಕ್ಕೆ ಕನ್ನಡ ತಂತ್ರಾಂಶ ಜನಕರಾದ ನಾಡೋಜ ಶ್ರೀ ಕೆ.ಪಿ. ರಾವ್ ರವರಿಂದ ಡಿಂಡಿಮ ಉದ್ಘಾಟನೆಗೊಳ್ಳಲಿದೆ. ಪ್ರೋ. ವರದೇಶ ಹಿರೇಗಂಗೆ ಮತ್ತು ಡಾ. ಪಾರ್ವತಿ ಐತಾಳ್ ಇವರ ಮಾತಿನರಮನೆ. ಜನಾನುರಾಗಿ ಬಸ್ ಚಾಲಕರಾದ ಶ್ರೀ ಎಚ್. ಹಂಝಾ ವಕ್ವಾಡಿ ಇವರಿಗೆ ಕನ್ನಡದ ನುಡಿ ಗೌರವ. ನಾಟ್ಯ ನಿಲಯಂ ಮಂಜೇಶ್ವರ ಕಾಸರಗೋಡು ಇವರ ನಾಟ್ಯೋಲ್ಲಾಸ ಕಾರ್ಯಕ್ರಮದ ಮೂಲಕ ಮೊದಲ ರವಿವಾರದ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ[/quote]

ಕುಂದಾಪುರ: ವರ್ಷವಿಡೀ ಕನ್ನಡದ ಕಂಪನ್ನು ಪಸರಿಸುವ ಕಾರ್ಯಗಳ ನಡುವೆ, ಕನ್ನಡ ಮಾಸ ನವೆಂಬರ್ ತಿಂಗಳು ಪೂರ್ತಿ ಕನ್ನಡಿಗರ ಕರತಾಡನದ ಸದ್ದು ಕುಂದಾಪುರವೆಂಬ ಕಡುಕನ್ನಡದ ಪಟ್ಟಣದಲ್ಲಿ ಸ್ಥಾಯಿಯಾಗಿ ಉಳಿಯುವಂತೆ ಮಾಡಲು ಕುಂದಾಪುರದ ಕನ್ನಡ ವೇದಿಕೆ ಸಜ್ಜಾಗಿ ನಿಂತಿದೆ. `ಡಿಂಡಿಮ’ ಎಂಬ ಶಿರೋನಾಮೆಯಲ್ಲಿ ಇಡಿ ನವೆಂಬರ್ ತಿಂಗಳನ್ನು ಕನ್ನಡಮಯವಾಗಿಸಲು ಸಕಲ ಸಿದ್ಧತೆಗಳೂ ನಡೆದಿವೆ. ಈ ತಿಂಗಳ ಎಲ್ಲ ಐದು ಭಾನುವಾರಗಳಲ್ಲೂ ಕುಂದಾಪುರದ ಹೃದಯದಲ್ಲಿರುವ ರೋಟರಿ ಲಕ್ಷ್ಮಿನರಸಿಂಹ ಕಲಾಮಂದಿರದಲ್ಲಿ ಡಿಂಡಿಮದ ಸದ್ದು ಕೇಳಿದರೇ, ಉಳಿದ ದಿನ ಕುಂದಾಪುರ ಸುತ್ತಲಿನ 22 ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿದೆ.

ಕನ್ನಡ ವೇದಿಕೆ ಕುಂದಾಪುರ:
ಕನ್ನಡದ ನೆಪದಲ್ಲಿ ಸೃಜನಶೀಲತೆ, ಜ್ಞಾನ, ಮೌಲ್ಯ ಹಾಗೂ ಸಂಬಂಧಗಳನ್ನು ಬೆಸೆಯಲು ಹುಟ್ಟಿಕೊಂಡ ಸಂಸ್ಥೆ: ಕನ್ನಡ ವೇದಿಕೆ ಕುಂದಾಪುರ. ಆಧುನಿಕತೆಯನ್ನು ಅನುಮೋದಿಸುವ ಭರಾಟೆಯಲ್ಲಿ ದೇಶ-ಭಾಷೆಗಳು ಸ್ಪಷ್ಟ ರೂಪ ತಾಳಲಾರದೆ ಅಯೋಮಯವಾಗಿರುವ ಈ ಸಂಕ್ರಮಣ ಸಂದರ್ಭದಲ್ಲಿ ಕುಂದಾಪುರದಂತಹ ಪಟ್ಟಣದಲ್ಲಿ ಕನ್ನಡವನ್ನು ಮಾರ್ದನಿಸುವ ಸಾಹಿತ್ತಿಕ, ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವ ಅಗತ್ಯತೆ ಇದೆ ಅಂದುಕೊಂಡು ಸಮಾನ ಮನಸ್ಕರಿಂದ ಆರಂಭಗೊಂಡ ಸಂಸ್ಥೆ ಕನ್ನಡ ವೇದಿಕೆ ಕುಂದಾಪುರ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಮೊದಲ ವರ್ಷವೇ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಸಂಸ್ಥೆ ಎರಡನೇ ವರ್ಷದಲ್ಲಿಯೂ ಕನ್ನಡ ಮಾಸವನ್ನು ಅರ್ಥಪೂರ್ಣವಾಗಿ ಆಚರಿಸಲು ಹೊರಟಿದೆ. ಸಂಸ್ಥೆಯ ಅಧ್ಯಕ್ಷರಾಗಿ ಸುಬ್ರಮಣ್ಯ ಶೆಟ್ಟಿ, ಉಪಾಧ್ಯಕ್ಷರಾಗಿ ಸದಾನಂದ ಬೈಂದೂರು, ಕಾರ್ಯದರ್ಶಿಯಾಗಿ ಉದಯ ಶೆಟ್ಟಿ, ಜೊತೆಕಾರ್ಯದರ್ಶಿಯಾಗಿ ರವಿ ಕಟ್ಕೆರೆ, ಕೋಶಾಧಿಕಾರಿಯಾಗಿ ಅಶೋಕ್ ತೆಕ್ಕಟ್ಟೆ ಇದ್ದರೇ, ದಿನಕರ ಆರ್, ಶೆಟ್ಟಿ, ಉದಯ ಗಾಂವಕಾರ, ವಿಶ್ವನಾಥ ಕರಬ, ಶಿವಾನಂದ ಶೆಟ್ಟಿ, ಹರ್ಷ ಕಟ್ಕೆರೆ, ಸತೀಶ್ ಶೆಟ್ಟಿಗಾರ್ ಜಪ್ತಿ, ಕೋನಳ್ಳಿ ರಾಜೀವ ನಾಯ್ಕ್, ಪ್ರಶಾಂತ್ ಶೆಟ್ಟಿ, ಜ್ಯೋತಿ ಆಚಾರ್ಯ, ಚೇತನಕುಮಾರ್ ಶೆಟ್ಟಿ ವೆಂಕಟೇಶ ನಾವುಂದ ಜತೆಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

Exit mobile version