Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸರಸ್ವತಿ ವಿದ್ಯಾಲಯಕ್ಕೆ ಶೇ.98.36 ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
2023-24ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಶೇ. 98.36 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 61 ವಿದ್ಯಾರ್ಥಿಗಳ ಪೈಕಿ 60 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 22 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 618 ಅಂಕಗಳನ್ನು ಪಡೆದಿರುವ ದೀಕ್ಷಾ ವಿ.ಕಾಮತ್ ಶಾಲೆಯಲ್ಲಿ ಅಗ್ರ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ.

ದೀಕ್ಷಾ ವಿ.ಕಾಮತ್ (618), ವೈಷ್ಣವಿ (607), ಆದಿತ್ಯ ಪೂಜಾರಿ (605), ಸಿಂಚನಾ ದೇವಾಡಿಗ (588), ಮಾನ್ವಿ ಎಸ್.ಪೂಜಾರಿ (587), ಗೌತಮಿ ಜಿ.ನಾಯಕ್ (586), ಐಶ್ವರ್ಯ ಎ.ಪೂಜಾರಿ (575), ಪ್ರತೀಕ್ ಕೊಠಾರಿ (572), ಶ್ರೀನಿಧಿ ವಿ.ಖಾರ್ವಿ (571), ಧನ್ಯ (568), ಧನುಶ್ ಶೇರುಗಾರ್ (565), ಅಕ್ಷಯ್ ಬಿಲ್ಲವ (562), ಅರ್ಪಿತಾ ಕುಲಾಲ್ (555), ಶ್ರಾವ್ಯ (551) ಉತ್ತಮ ಸಾಧನೆ ಮಾಡಿದ್ದಾರೆ.

Exit mobile version