Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಮೋಕ್ಷಧಾಮದಲ್ಲಿ ಶಿವನ ಮೂರ್ತಿ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ರುದ್ರಭೂಮಿಯನ್ನು ಶಿವನ ಮೂರ್ತಿಯನ್ನು ನಿರ್ಮಿಸಿರುವುದು ದೇವಾಲಯ ನಿರ್ಮಿಸಿದಷ್ಟೇ ಪುಣ್ಯದ ಕೆಲಸ. ಶಿವನ ವಾಸಸ್ಥಾನವೇ ರುದ್ರಭೂಮಿ. ಹೀಗಾಗಿ ರುದ್ರಭೂಮಿಯ ಪಾವಿತ್ರ್ಯತೆ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ರುದ್ರಭೂಮಿಯನ್ನು ನವೀಕರಣಗೊಳಿಸಿ ಶಿವನ ಮೂರ್ತಿಯನ್ನು ನಿರ್ಮಿಸಿರುವುದು ಅತ್ಯಂತ ಪವಿತ್ರವಾದ ಕೆಲಸ. ಈ ಮಹತ್ಕಾರ್ಯದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ದೇವರು ಸನ್ಮಂಗಲವನ್ನುಂಟು ಮಾಡಲಿ ಎಂದು ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಿ. ರವೀಶ್ ಭಟ್ ಹೇಳಿದರು.

ಶ್ರೀ ವೀರೇಶ್ವರ ಸೇವಾ ಟ್ರಸ್ಟ್ ಗಂಗೊಳ್ಳಿ ಮತ್ತು ವೀರ ಸಾವರ್ಕರ್ ಬಳಗ ಗಂಗೊಳ್ಳಿ ಇದರ ನೇತೃತ್ವದಲ್ಲಿ ಗಂಗೊಳ್ಳಿ ಗ್ರಾಮದ ದುರ್ಗಿಕೇರಿಯ ಸಾರ್ವಜನಿಕ ಹಿಂದು ರುದ್ರಭೂಮಿ ’ಮೋಕ್ಷ ಧಾಮʼ ದಲ್ಲಿ ನೂತನವಾಗಿ ನಿರ್ಮಿಸಲಾದ ಶಿವನ ಮೂರ್ತಿಯನ್ನು ಇತ್ತಿಚಿಗೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶಿಲ್ಪಿ ಕುಮಾರ್ ಶಿವಮೊಗ್ಗ ಅವರನ್ನು ಸನ್ಮಾನಿಸಲಾಯಿತು. ರುದ್ರಭೂಮಿಯ ನವೀಕರಣ ಹಾಗೂ ಶಿವನಮೂರ್ತಿ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು, ಗುತ್ತಿಗೆದಾರರು ಹಾಗೂ ಸಹಕರಿಸಿದವರನ್ನು ಗೌರವಿಸಲಾಯಿತು.

ಗಂಗೊಳ್ಳಿ ಗ್ರಾಮ ಪಂಚಾಯತ್ನ ಪಿಡಿಒ ಉಮಾಶಂಕರ, ಗ್ರಾಪಂ.ನ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ನಿಕಟಪೂರ್ವ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗ್ರಾಪಂ ಸದಸ್ಯ ಬಿ.ಲಕ್ಷ್ಮೀಕಾಂತ ಮಡಿವಾಳ, ತ್ರಾಸಿ ವಲಯ ಮೇಲ್ವಿಚಾರಕ ಚಂದ್ರು, ಉದ್ಯಮಿ ದಿನೇಶ ಜೋಗಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಕಂಚುಗೋಡು, ಹಿಂದು ಜಾಗರಣ ವೇದಿಕೆಯ ಮುಖಂಡಾರದ ವಾಸುದೇವ ದೇವಾಡಿಗ, ರಾಘವೇಂದ್ರ ಗಾಣಿಗ, ಶ್ರೀಧರ ನಾಯ್ಕ್, ಮೋಹನ ಖಾರ್ವಿ, ಗುತ್ತಿಗೆದಾರರಾದ ರಾಜೇಂದ್ರ ಶೇರುಗಾರ್, ಅನಂತ ದೇವಾಡಿಗ, ಶ್ರೀನಿವಾಸ ಎಂ., ವೀರ ಸಾವರ್ಕರ್ ಬಳಗದ ನವೀನ್ ಗಂಗೊಳ್ಳಿ, ಶ್ರೀ ವೀರೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಅಕ್ಷಯ್, ಸದಸ್ಯರಾದ ರಾಘವೇಂದ್ರ ಖಾರ್ವಿ, ದಿಲೀಪ್, ಅನಿಲ್ ಖಾರ್ವಿ, ಪ್ರಿತೇಶ್ ಖಾರ್ವಿ, ಯೋಗೀಶ್ ಖಾರ್ವಿ, ರವಿರಾಜ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ತಿಕ್ ಖಾರ್ವಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version