Kundapra.com ಕುಂದಾಪ್ರ ಡಾಟ್ ಕಾಂ

ಸಾಹಸ – ಪ್ರಕೃತಿ ಪ್ರಿಯರಿಗೆ ವೈವಿಧ್ಯಮಯ ಅನುಭವ ನೀಡುವ ಟಿಂಟನ್ ಅಡ್ವೆಂಚರ್ ರೆಸಾರ್ಟ್

ಕುಂದಾಪ್ರ ಡಾಟ್ ಕಾಂ
ಕುಂದಾಪುರ:
ಪ್ರಕೃತಿ ಪ್ರಿಯರು ಹಾಗೂ ಸಾಹಸ ಪ್ರಿಯರಿಗೆ ವೈವಿಧ್ಯಮಯ ಸಾಹಸದ ಅನುಭವವನ್ನು ನೀಡುವ ಸುಂದರ ತಾಣವೊಂದು ಉಡುಪಿ ಗೋಳಿಯಂಗಡಿ – ಬೆಳ್ವೆ ಪರಿಸರದಲ್ಲಿದೆ. ಅದುವೇ ಟಿಂಟನ್ ಅಡ್ವೆಂಚರ್ ರೆಸಾರ್ಟ್.

ಹಚ್ಚಹಸಿರು ಪರಿಸರ, ಪ್ರಶಾಂತವಾಗಿ ಹರಿಯುವ ನದಿ. ಇದಕ್ಕೆ ಹೊಂದಿಕೊಂಡಿರುವ ರೆಸಾರ್ಟ್, ಪ್ರಕೃತಿ ಸೌಂದರ್ಯದ ನಡುವೆ ಶಾಂತಿ ಮತ್ತು ನೆಮ್ಮದಿಯನ್ನು ಬಯಸುವವರಿಗೆ ಒಂದು ಉತ್ತಮ ಪ್ರವಾಸಿ ತಾಣವಾಗಲಿದೆ.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗಳ ಅನುಕೂಲಕ್ಕೆ ಬೇಕಾದ ವಸತಿ ವ್ಯವಸ್ಥೆಯನ್ನು ಹೊಂದಿದೆ. ಪ್ರಕೃತಿ ಸೊಬಗಿನ ನಡುವೆ ಆಧುನಿಕ ಸೌಕರ್ಯದೊಂದಿಗೆ ವಿಶಾಲವಾದ ಒಳಾಂಗಣ ಹೊಂದಿರುವ ಐಷಾರಾಮಿ ವಸತಿ ವ್ಯವಸ್ಥೆಯನ್ನು ಹೊಂದಿದೆ.

ವಿಶೇಷ ರಿಯಾಯಿತಿ:
ಈ ಬೇಸಿಗೆ ರಜೆಯನ್ನು ಆನಂದದಿಂದ ಕಳೆಯಬೇಕು ಎನ್ನುವವರಿಗೆ ಈ ರೆಸಾರ್ಟ್ ಉತ್ತಮ ರಿಯಾಯಿತಿ ಕೊಡುಗೆಯನ್ನು ನೀಡುತ್ತಿದೆ. ಇಲ್ಲಿ ಶಾಲಾ ಪ್ರವಾಸ, ಫ್ಯಾಮಿಲಿ ಔಟಿಂಗ್, ಕಛೇರಿ ಕೆಲಸದಿಂದ ಸ್ವಲ್ಪ ಬಿಡುವು ಮಾಡಿಕೊಂಡು ಸ್ವಲ್ಪ ರಿಫ್ರೆಶ್ ಆಗಬೇಕು ಎನ್ನುವವರಿಗಾಗಿಯೇ ವಿಶೇಷವಾಗಿ ಶೇ. 10 ರಿಯಾಯ್ತಿಯೊಂದಿಗೆ ಗ್ರೂಪ್ ಬುಕ್ಕಿಂಗ್ ಆರಂಭಗೊಂಡಿದೆ. ಜೊತೆಗೆ ವಿದ್ಯಾರ್ಥಿಗಳಿಗಾಗಿ ಶೇ. 15 ರಿಯಾಯಿತಿಯನ್ನೂ ನೀಡಲಾಗುತ್ತಿದೆ.

ರೆಸಾರ್ಟ್ನಲ್ಲಿ ನಡೆಸುವ ಚಟುವಟಿಕೆಗಳು:

ವಾಟರ್ ಪಾರ್ಕ್‌ನಲ್ಲಿ ಚಟಿವಟಿಕೆಗಳು:

ನದಿಯ ತಟದಲ್ಲಿ ಕಾರ್ಯಕ್ರಮಕ್ಕೆ ವ್ಯವಸ್ಥೆ:
ಉಡುಪಿ, ಕುಂದಾಪುರ, ಶಿವಮೊಗ್ಗದಿಂದ ಇಲ್ಲಿಗೆ ಸುಲಭ ಮಾರ್ಗದಲ್ಲಿ ಭೇಟಿ ನೀಡಬಹುದು. ಇದೊಂದು ಪ್ರವಾಸಿ ತಾಣ ಮಾತ್ರ ಆಗಿರದೆ ಇಲ್ಲಿ ಶುಭ ಸಮಾರಂಭಗಳ ಇವೆಂಟ್ ಕೂಡಾ ಆಚರಿಸಬಹುದಾಗಿದೆ. ಇಲ್ಲಿ ಮದುವೆ, ಫ್ರೀ ವೆಡ್ಡಿಂಗ್ ಪೋಟೋ ಶೋಟ್ ಮತ್ತು ಇತರ ಖಾಸಗಿ ಸಮಾರಂಭಗಳಿಗೂ ಹೇಳಿ ಮಾಡಿಸಿದ ಜಾಗ ಇದಾಗಿದೆ.

ಸುರಕ್ಷತೆಗೆ ಆದ್ಯತೆ:
ಇಲ್ಲಿ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಇಲ್ಲಿ ಜಲ ಕ್ರೀಡಾ ಚಟುವಟಿಕೆಗಾಗಿ ತರಬೇತಿ ಪಡೆದ ವೃತ್ತಿಪರರ ತಂಡವು ಪ್ರವಾಸಿಗರೊಂದಿಗೆ ಸದಾ ಇರುತ್ತಾರೆ. ಜೊತೆಗೆ ಈಜು ಕೊಳ ಮತ್ತು ವಾಟರ್ ಪಾಕ್ರ್ನಲ್ಲಿ ಸಿಸಿ ಕ್ಯಾಮೆರಾ ಮತ್ತು ಜೀವ ರಕ್ಷಕ ವ್ಯವಸ್ಥೆಯನ್ನು ಮಾಡಲಾಗಿದೆ.

ಚಿಕ್ಕಮಗಳೂರಿನಲ್ಲಿ ಟಿಂಟನ್ ಹಿಲ್ ಸ್ಟೇ:
ಟಿಂಟನ್ ಅಡ್ವೆಂಚರ್ ರೆಸಾರ್ಟ್ ಉಡುಪಿ ಮಾತ್ರವಲ್ಲದೆ “ಟಿಂಟನ್ ಹಿಲ್ ಸ್ಟೇ” ಹೆಸರಿನಲ್ಲಿ ಚಿಕ್ಕಮಗಳೂರಿನಲ್ಲಿಯೂ ಈ ರೆಸಾರ್ಟ್ ಇದೆ. ಈ ಸ್ನೇಹಶೀಲ 3-ಕೋಣೆಯ ವಿಲ್ಲಾ ಆರಾಮದಾಯಕ ಮತ್ತು ಸುಸಜ್ಜಿತ ಕೊಠಡಿಗಳನ್ನು ನೀಡುತ್ತದೆ, ಅತಿಥಿಗಳಿಗೆ ಶಾಂತಿಯುತ ಹಿಮ್ಮೆಟ್ಟುವಿಕೆಯನ್ನು ಒದಗಿಸುತ್ತದೆ. ಸುತ್ತಮುತ್ತಲಿನ ಭೂದೃಶ್ಯದ ನೈಸರ್ಗಿಕ ಸೌಂದರ್ಯದೊಂದಿಗೆ ಆಧುನಿಕ ಅನುಕೂಲಗಳನ್ನು ಸಂಯೋಜಿಸಲು ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ.

ಒಟ್ಟಿನಲ್ಲಿ ಪ್ರವಾಸದ ಉತ್ತಮ ಅನುಭವ ಪಡೆಯಬೇಕು ಎನ್ನುವವರಿಗೆ ಟಿಂಟನ್ ರೆಸಾರ್ಟ್ ಒಂದು ಉತ್ತಮ ಆಯ್ಕೆ. ಅದರ ಬೆರಗುಗೊಳಿಸುವ ನದಿ ತೀರದ ಸೆಟ್ಟಿಂಗ್, ರೋಮಾಂಚಕ ಚಟುವಟಿಕೆಗಳು ಮತ್ತು ಉನ್ನತ ದರ್ಜೆಯ ಸೌಕರ್ಯಗಳೊಂದಿಗೆ, ರೆಸಾರ್ಟ್ ಎಲ್ಲಾ ವಯಸ್ಸಿನ ಅತಿಥಿಗಳಿಗೆ ಸಾಹಸ ಮತ್ತು ವಿಶ್ರಾಂತಿಯ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ. ಟಿಂಟನ್ ಅಡ್ವೆಂಚರ್ ರೆಸಾರ್ಟ್ನಲ್ಲಿ ನಿಮ್ಮ ಮುಂದಿನ ಸಾಹಸವನ್ನು ಯೋಜಿಸಿ ಮತ್ತು ಜೀವಿತಾವಧಿಯಲ್ಲಿ ಉಳಿಯುವ ನೆನಪುಗಳನ್ನು ಮಾಡಿ. ಇಲ್ಲಿ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನೂ ಮರೆಯಲಾಗದೆ ಅದ್ಬುತ, ರಮಣೀಯವಾದ ಅನುಭವವನ್ನು ತನ್ನೊಂದಿಗೆ ಕೊಂಡುಹೋಗೋದಂತು ಸತ್ಯ.

ಬುಕ್ಕಿಂಗ್‌ಗಾಗಿ ಸಂಪರ್ಕಿಸಿ
Website
: https://tintonresorts.com/
Instagram: https://www.instagram.com/tinton_resort/
Facebook: https://www.facebook.com/tintonadventureresort

Exit mobile version