ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾಧಿಕಾರಿಗಲ ಕಛೇರಿಯ ಐಟಿ ನಿರ್ದೇಶಕ ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ ಮಂಜುನಾಥ ಆನಂದ ( 53 ವಷ೯) ಅವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೂಲತಃ ಕೋಟದವರಾದ ಮಂಜುನಾಥ್ ಅವರು ಕುತ್ಪಾಡಿಯಲ್ಲಿ ನೆಲೆಸಿದ್ದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇ ತಂತ್ರಾಂಶ ನಿವ೯ಹಣೆ, ಚುನಾವಣಾ ಸಮಯ ಐ.ಟಿ. ಎಪ್ಲಿಕೇಶನ್ ನಿವ೯ಹಣೆ ಮಾಡಿರುವುದು, 2007ರಲ್ಲಿ ಉಡುಪಿ ಜಿಲ್ಲೆಯ ಡಿಸಿ ಕಚೇರಿಯಲ್ಲಿ ಪ್ರಥಮವಾಗಿ PLO ( ಪೇಪರ್ ಲೆಸ್ ಆಫೀಸ್) ನ್ನು ಆರಂಭಿಸಿದ ಸಮಯ ಎನ್ಐಸಿ. ಮುಖ್ಯಸ್ಥರಾಗಿ ಕೆಲಸ ನಿವ೯ಹಣೆ, ಜಿಲ್ಲಾ ವೆಬ್ಸೈಟ್ ನಿವ೯ಹಣೆಯ ಜವಾಬ್ದಾರಿ ಹೊತ್ತಿದ್ದರು.
ಮೃತರು ಪತ್ನಿ ಗೀತಾ, ಮಕ್ಕಳಾದ ಗ್ರೀಷ್ಮಾ, ರೋಷ್ನಿ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕೋಟದಲ್ಲಿ ನಡೆಯಿತು.