Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಣಿ: ಮೂರೂರು ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ ಸಂದೇಶ್‌ ಕಾಂಚನ್‌ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ:
ತಾಲೂಕಿನ ಕೋಣಿ ಮೂರೂರು ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ನೂತನ ಅಧ್ಯಕ್ಷರಾಗಿ ನೀರಾಡಿಮಕ್ಕಿ  ಸಂದೇಶ್‌ ಕಾಂಚನ್‌, ಕಾರ್ಯದರ್ಶಿಯಾಗಿ ಕಿರಣ್‌ ಆಚಾರ್‌ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಗೌರವಾಧ್ಯಕ್ಷರಾಗಿ ಸುಬ್ಬಣ್ಣ ಕೋಣಿ, ಉಪಾಧ್ಯಕ್ಷರಾಗಿ ಮಹೇಶ್ ಪೂಜಾರಿ, ಕೋಶಾಧಿಕಾರಿಯಾಗಿ  ಗಜೇಂದ್ರ ಆಚಾರ್,  ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ ಪೂಜಾರಿ ಆಯ್ಕೆಯಾಗಿದ್ದಾರೆ.

ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಧರ ಚಂದನ್, ಸುಧೀರ್ ಪೂಜಾರಿ,  ಅಂಕಿತಾ, ತನುಜಾ, ತೇಜಸ್ವಿನಿ, ಕ್ರೀಡಾ ಕಾರ್ಯದರ್ಶಿ  ಮಂಜುನಾಥ ಪೂಜಾರಿ, ಜಯಪ್ರಶಾಂತ್ ಪೂಜಾರಿ, ಈಶ್ವರ ಪೂಜಾರಿ, ಪವನ್, ನಿತ್ಯಾನಂದ (ರಾಮ) ,ಮಹೇಶ್ ಬಂಗೇರ,ಶ್ರೇಯಸ್, ಲೆಕ್ಕಪರಿಶೋಧಕರಾದ  ರಘು.ವಿ ಪೂಜಾರಿ, ಮನೋಹರ ಹೆಚ್.ಎಂ.ಟಿ, ಉದಯ ಮಲ್ಲನಬೆಟ್ಟು, ಬಾಬು ಬೆನಕ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಗೌರವಾಧ್ಯಕ್ಷರಾದ ಸುಬ್ಬಣ್ಣ ಕೋಣಿಯವರ ಮಾರ್ಗದರ್ಶನದಲ್ಲಿ 26ನೇ ವಾರ್ಷೀಕೋತ್ಸವದ ಆಯವ್ಯಯ ಮಂಡನೆ ಹಾಗೂ 2024- 25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

Exit mobile version