Site icon Kundapra.com ಕುಂದಾಪ್ರ ಡಾಟ್ ಕಾಂ

ಜೆಸಿಐ ಉಪ್ಪುಂದದ ವಿಶಂತಿ ಮಹೋತ್ಸವ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಉಪ್ಪುಂದ ಶಾಲೆಬಾಗಿಲುನಲ್ಲಿ ಜೆಸಿಐ ಉಪ್ಪುಂದದ ವಿಶಂತಿ ಮಹೋತ್ಸವ ಜೆಸಿಐ ಸಂಭ್ರಮ 2024 ಜರುಗಿತು.

ಕಾರ್ಯಕ್ರಮವನ್ನು ಜೆ.ಎನ್.ಎಸ್ ಕನ್ಸ್ಟ್ರಕ್ಷನ್ ಗ್ರೂಪ್ ಆಫ್ ಘಟಪ್ರಭಾ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಜಯಶೀಲ ನಾರಾಯಣ ಶೆಟ್ಟಿ  ದೀಪ ಪ್ರಜ್ವಲಿಸಿ 20 ರ ಸವಿನೆನಪಿಗಾಗಿ 20 ಬಲೂನುಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ಥಾಪಕಾಧ್ಯಕ್ಷರಾದ ದಿವಾಕರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕೇವಲ 15 ಸದಸ್ಯರನ್ನು ಕೂಡಿಕೊಂಡು 2005ರಲ್ಲಿ  ಉದ್ಘಾಟನೆಗೊಂಡ ಈ ಸಂಸ್ಥೆ  ಕ್ರಮೇಣ ಈ ಭಾಗದ ಜನರ ಸಹಕಾರದಿಂದ  ಇಂದು 20 ನೇ ವರ್ಷಕ್ಕೆ ಕಾಲಿರಿಸಿರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಉಪ್ಪುಂದ ಹೊಳೆಕಡಿಮನೆ  ವೆಂಕಟೇಶ್ ಪೂಜಾರಿ ಹಾಗೂ ಕಳೆದ 20 ವರ್ಷಗಳಿಂದ ಜೆಸಿಐ ಉಪ್ಪುಂದ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ  ಉಪ್ಪುಂದ ದೇವಾಡಿಗರ ಸಂಘದ ಗೌರವಾಧ್ಯಕ್ಷರಾದ ಜನಾರ್ದನ ದೇವಾಡಿಗ ಉದ್ಯಮಿಗಳು ಮುಂಬೈ, ವಲಯ 15 ಅಧ್ಯಕ್ಷರಾದ ಸೆನೆಟರ್ ಗಿರೀಶ್ ಎಸ್ ಪಿ, ಉದ್ಯಮಿಗಳಾದ ಕೃಷ್ಣ ದೇವಾಡಿಗ ಹೊಸಾಡು,  ಉಪ್ಪುಂದ ಮಾತೃಶ್ರೀ ಸಭಾಭವನದ ಮಾಲಕರಾದ ಮಂಜು ದೇವಾಡಿಗ ಅರೆಹಾಡಿ, ವಲಯ 15ರ ಉಪಾಧ್ಯಕ್ಷರಾದ ವಿಘ್ನೇಶ್ ಪ್ರಸಾದ್, ಜೆಸಿಐ ಉಪ್ಪುಂದ ನಿಕಟ ಪೂರ್ವಾದ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ , ಅಧ್ಯಕ್ಷರಾದ ಮಂಜುನಾಥ್ ದೇವಾಡಿಗ, ಲೇಡಿ ಅಧ್ಯಕ್ಷೆ ಸುಮನಾ, ಜೆಜೆಸಿ ಅಧ್ಯಕ್ಷೆ ಸಂಜನಾ ಮೊದಲಾದವರು ಉಪಸ್ಥಿತರಿದ್ದರು‌.

ಅಧ್ಯಕ್ಷರಾದ ಮಂಜುನಾಥ್ ದೇವಾಡಿಗ ಸ್ವಾಗತಿಸಿ, ಶರತ್ ಕುಮಾರ್ ಶೆಟ್ಟಿ ವೇದಿಕೆಗೆ  ಆಹ್ವಾನಿಸಿದರು. ಸಂಜನಾ ದೇವಾಡಿಗ ಜೆಸಿವಾಣಿ ವಾಚಿಸಿದರು, ಸುಪರ್ಣಾ, ಶಿಲ್ಪಾ ದೇವಾಡಿಗ, ಸುಮನಾ ದೇವಾಡಿಗ, ಶ್ರೀಲತಾ, ರಮಣಿ, ಶ್ರೀಮತಿ,  ರಾಮಕೃಷ್ಣ ಖಾರ್ವಿ ಸನ್ಮಾನಿತರ ಪರಿಚಯ ವಾಚಿಸಿದರು. ನರಸಿಂಹ ದೇವಾಡಿಗ ವಂದಿಸಿದರು. ಬಳಿಕ  ಶಿವದೂತ ಗುಳಿಗ ನಾಟಕ ಪ್ರದರ್ಶನಗೊಂಡಿತು‌.

Exit mobile version