Kundapra.com ಕುಂದಾಪ್ರ ಡಾಟ್ ಕಾಂ

ವಿಶ್ವ ರಾಮಕ್ಷತ್ರಿಯ ಮಹಾಸಂಘದ ಮಹಾಯಾಗಕ್ಕೆ ಹೊರೆಕಾಣಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿಶ್ವ ರಾಮಕ್ಷತ್ರಿಯ ಮಹಾಸಂಘದ ನೇತೃತ್ವದಲ್ಲಿ ಬಾಳೆಕುದ್ರು ಶ್ರೀ ಮಠದಲ್ಲಿ ಮೇ.26 ರಂದು ನಡೆಯಲಿರುವ ಮಹಾಮೃತ್ಯುಂಜಯ ಯಾಗ, ಚಂಡಿಕಾಹೋಮ ಹಾಗೂ ಗಣಹೋಮದ ಅಂಗವಾಗಿ ವಿವಿಧೆಡೆಗಳಿಂದ ಬಂದಿದ್ದ ಹೊರೆಕಾಣಿಕೆಯನ್ನು ಶ್ರೀ ಮಠದ ಯಾಗ ಸ್ಥಳಕ್ಕೆ ಕೊಂಡೊಯ್ಯಲಾಯಿತು.

ಮೆರವಣಿಗೆಗೆ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇಗುಲದ ಸಭಾಂಗಣದಲ್ಲಿ ಅಧ್ಯಕ್ಷರಾದ ಹೆಚ್.ಎಸ್. ಶಶಿಧರ್ ನಾಯ್ಕ್ ಅವರು ಚಾಲನೆ ನೀಡಿದರು. ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Exit mobile version