Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ತಾಲೂಕು ಸವಿತಾ ಸಮಾಜ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ತಾಲೂಕು ಸವಿತಾ ಸಮಾಜ ಹಾಗೂ ಉಪ್ಪುಂದ ವಲಯ ಸವಿತಾ ಸಮಾಜ ಮತ್ತು ಸವಿತಾ ಸಮಾಜ ಕೊಲ್ಲೂರು ಮತ್ತು ನಾಗೂರು ಘಟಕ ಇದರ ಉದ್ಘಾಟನೆಯನ್ನು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಂಬಲಪಾಡಿ ಉಡುಪಿ ಇದರ ಅಧ್ಯಕ್ಷರಾದ ನವೀನ್ ಚಂದ್ರ ಭಂಡಾರಿ ಎಂ ಎಸ್ ಸಿ ಮಣಿಪಾಲ್ ಇವರು ಶ್ರೀ ರಾಘವೇಂದ್ರ ಮಠದ ಸಭಾ ವೇದಿಕೆಯಲ್ಲಿ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷರಾಗಿ ಬೈಂದೂರಿನ ಪ್ರಶಾಂತ್ ಭಂಡಾರಿ, ಅಧ್ಯಕ್ಷರಾಗಿ ಬೈಂದೂರು ತಾಲೂಕು ಸವಿತಾ ಸಮಾಜ, ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ವಿಶ್ವನಾಥ್ ಭಂಡಾರಿ, ನಿಂಜೂರು ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷರಾದ ಗೋವಿಂದ ಭಂಡಾರಿ, ಬನಂಜೆ ಕುಂದಾಪುರ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಸುಭಾಷ್ ಭಂಡಾರಿ, ಗುಜ್ಜಾಡಿ ಬೈಂದೂರು ತಾಲೂಕು ಸವಿತಾ ಸಮಾಜದ ಗೌರವ ಅಧ್ಯಕ್ಷರಾದ ಸಂತೋಷ್ ಭಂಡಾರಿ ಉಪ್ಪುಂದ ಮೊದಲಾದವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ಮೊದಲು ತಾಲೂಕು ಸವಿತಾ ಸಮಾಜದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನೆರವೇರಿತು ಮತ್ತು ಸಭಾ ಕಾರ್ಯಕ್ರಮದಲ್ಲಿ ತಾಲೂಕು ಸವಿತಾ ಸಮಾಜದ ವತಿಯಿಂದ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಪುಸ್ತಕ ಗಳನ್ನು ವಿತರಿಸಲಾಯಿತು.

ಹಿರಿಯವೃತ್ತಿ ಬಾಂಧವರಾದ ಬಾಬು ಭಂಡಾರಿ ಕೊಲ್ಲೂರು ಹಾಗೂ ಅಣ್ಣಪ್ಪ ಭಂಡಾರಿ ಬೈಂದೂರು ಇವರನ್ನು ಹಾಗೂ ಬಹು ಮುಖ ಪ್ರತಿಭೆ  ಮಿಮಿಕ್ರಿ ಕಲಾವಿದ ಹಾಗೂ ಮಜಾ ಭಾರತ ಖ್ಯಾತಿಯ ಕೆಕೆ ರಾಘು ಯಾನೆ ರಾಘು ಭಂಡಾರಿ ರಟಾಡಿ ಆಲೂರು ಇವರನ್ನು  ಸನ್ಮಾನಿಸಿ ಗೌರವಿಸಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳಿಸಿದ ಸವಿತಾ ಸಮಾಜದ ವಿದ್ಯಾರ್ಥಿಗಳಾದ ನೇಹಾ ಜಗದೀಶ್ ಭಂಡಾರಿ ಮರವಂತೆ ದ್ವಿತೀಯ ಪಿಯುಸಿ 92.33% ವಿಜ್ಞಾನ ವಿಭಾಗ, ಪ್ರಜ್ಞ ನಾಗರಾಜ ಭಂಡಾರಿ ಸಾಲಿಮಕ್ಕಿ ಬಿಜೂರು ದ್ವಿತೀಯ ಪಿಯುಸಿ 89% ವಿಜ್ಞಾನ ವಿಭಾಗ, ನಿಶಾ ಸುರೇಶ್ ಭಂಡಾರಿ ಕೊಲ್ಲೂರು ದ್ವಿತೀಯ ಪಿಯುಸಿ 92.33% ಕಾಮರ್ಸ್, ಮದನ್ ರಾಜು ಭಂಡಾರಿ ನಾಕಟ್ಟೆ ಬೈಂದೂರು ದ್ವಿತೀಯ ಪಿಯುಸಿ 86% ಕಾಮರ್ಸ್ ಎಲ್ಲ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರಾವ್ಯ ಲಕ್ಷ್ಮಣ್ ಭಂಡಾರಿ ಹೆರಂಜಾಲು ಪ್ರಾರ್ಥನೆಗೆ ಗೈದು, ಗೌತಮಿ ಗೋಪಾಲ್ ಭಂಡಾರಿ ಕಂಚಿಕಾನ್ ಬಿಜೂರು ಸ್ವಾಗತಿಸಿದರು. ಪ್ರಜ್ಞ ನಾಗರಾಜ್ ಭಂಡಾರಿ ಸಾಲಿಮಕ್ಕಿ ಮತ್ತು ನೇಹಾ ಜಗದೀಶ್ ಭಂಡಾರಿ ಮರವಂತೆ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಮಲ್ಯ ಉಪ್ಪುಂದ ಧನ್ಯವಾದ ಸಮರ್ಪಿಸಿದರು.

Exit mobile version