Site icon Kundapra.com ಕುಂದಾಪ್ರ ಡಾಟ್ ಕಾಂ

ಸಹಕಾರ ತತ್ವ ಹಾಗೂ ಸಹಕಾರಿ ಕ್ಷೇತ್ರದ ವ್ಯವಸ್ಥಾಪನೆ – ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಮೂಡುಬಿದರೆಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖಂಬದಕೋಣೆ ರೈತರ ಸೇವಾ  ಸಹಕಾರಿ ಸಂಘ ನಿ., ಉಪ್ಪುಂದ  ಇದರ ಅಧ್ಯಕ್ಷರಾದ  ಎಸ್ ಪ್ರಕಾಶ್ಚಂದ್ರ ಶೆಟ್ಟಿ ಅವರು ಶಿಬಿರಾರ್ಥಿಗಳಿಗೆ ಸಹಕಾರ ತತ್ವ ಹಾಗೂ ಸಹಕಾರಿ ಕ್ಷೇತ್ರದ ವ್ಯವಸ್ಥಾಪನೆ ಮತ್ತು ಸಿಬ್ಬಂದಿಗಳ ಪಾತ್ರದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತರಬೇತಿ ಕೇಂದ್ರದ  ಪ್ರಾಂಶುಪಾಲರಾದ ವಿಶ್ವೇಶ್ವರಯ್ಯ, ಉಪನ್ಯಾಸಕರಾದ  ಬಿಂದು ನಾಯರ್, ಹರೀಶ ಎಂ  ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಘದ ಸಿಇಓ ವಿಷ್ಣು ಆರ್ ಪೈ ಉಪಸ್ಥಿತರಿದ್ದರು.

Exit mobile version