Kundapra.com ಕುಂದಾಪ್ರ ಡಾಟ್ ಕಾಂ

ನಾಯ್ಕನಕಟ್ಟೆಯಲ್ಲಿ ಲಾರಿ-ಬೈಕ್ ಢಿಕ್ಕಿ. ಬೈಕ್ ಸವಾರ ಸಾವು

ಬೈಂದೂರು: ಇಲ್ಲಿಗೆ ಸಮೀಪದ ನಾಯ್ಕನಕಟ್ಟೆ ಬಳಿ ಲಾರಿಯೊಂದು ಮೊಪೆಡ್‌ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭಿರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಇಂದು ಸಂಜೆಯ ವೇಳೆಗೆ ನಡೆದಿದೆ.  ನಂದನವನ ನಿವಾಸಿ ಲಕ್ಷ್ಮಣ ಭಟ್ (66) ಮೃತ ದುರ್ದೈವಿ.

ಬೈಂದೂರಿನಿಂದ ಕುಂದಾಪುರಕ್ಕೆ ಸಾಗುತ್ತಿದ್ದ ಲಾರಿ ಉಪ್ಪುಂದ ಕಡೆಯಿಂದ ನಂದನವನದತ್ತ ಸಾಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಾಗ ಬೈಕ್ ಸವಾರ ಪಕ್ಕಕ್ಕೆ ಬಿದ್ದು, ಬೈಕ್ ಮೇಲೆ ಲಾರಿ ಏರಿಹೋದ ಪರಿಣಾಮ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿತ್ತು. ಗಂಭೀರವಾಗಿ ಗಾಯಗೊಂಡ ಲಕ್ಷ್ಮಣ ಭಟ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. (ಕುಂದಾಪ್ರ ಡಾಟ್ ಕಾಂ)  ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Lorry bike accident byndoor2

Exit mobile version