Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿಯಲ್ಲಿ ಮುಂಗಾರು ಅಬ್ಬರ: ಅಲ್ಲಲ್ಲಿ ಹಾನಿ, ವಿದ್ಯುತ್ ವ್ಯತ್ಯಯ. ಮುಂದಿನ 24 ಗಂಟೆ ರೆಡ್ ಅಲರ್ಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಕಳೆದೊಂದು ದಿನದಿಂದ ಗಾಳಿ ಸಹಿತ ಮಳೆಗೆ ಅಲ್ಲಲ್ಲಿ ಹಾನಿಯಾಗುತ್ತಿದೆ. ಧಾರಾಕಾರ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ.

ಮುಂದಿನ 24 ಗಂಟೆಗಳಿಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರದಲ್ಲಿ ಗಾಳಿಯ ಒತ್ತಡವಿದ್ದು, ಮೀನುಗಾರರು ಜು.11ರ ತನಕ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಶನಿವಾರ ಬೆಳಿಗ್ಗೆಯಿಂದ ಸುರಿದ ಗಾಳಿ ಮಳೆಗೆ ಉಡುಪಿ ಜಿಲ್ಲಾದ್ಯಂತ ವಿವಿಧೆಡೆ ಹಾನಿಯಾಗಿದೆ. ಹಾಳೆ ಮಳೆಗೆ ಅಲ್ಲಲ್ಲಿ ರಸ್ತೆಗೆಯಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವುದು, ಮನೆ ಹಾನಿ ಪ್ರಕರಣಗಳು ದಾಖಲಾಗಿದೆ. ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಮರ ಬಿದ್ದುದರಿಂದ 15 ನಿಮಿಷಗಳ ಕಾಲ ಸಂಚಾರ ವ್ಯತ್ಯಯವಾಯಿತು. ಇನ್ನು ಗದ್ದೆಗಳಲ್ಲಿ ಉಳುವೆಗಾಗಿ ಹಾಕಿದ್ದ ಗೊಬ್ಬರ, ಬೀಜ ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿ ಹಾನಿಯುಂಟಾಗಿದೆ. ಯಡ್ತರೆ ಸರ್ಕಾರಿ ಶಾಲೆಯ ಮೂರು ತರಗತಿಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಮಳೆಯಬ್ಬರಕ್ಕೆ ಅಲ್ಲಲ್ಲಿ ವಿದ್ಯುತ್ ವ್ಯತ್ಯವಾಗಿದ್ದು, ರಾತ್ರಿಯ ತನಕವೂ ವಿದ್ಯುತ್ ಮರಸಂಪರ್ಕ ಕಷ್ಟಸಾಧ್ಯವೆನ್ನಲಾಗಿದೆ.

ಮುಂಗಾರು ಮಳೆ ಸಿಂಚನಕ್ಕೆ ತಣಿದ ಹಾಹಾಕಾರ:
ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಚುಟವಟಿಕೆಗಳು ಚುರುಕುಗೊಂಡಿವೆ. ಬಿರು ಬಿಸಿಲು, ನೀರಿನ ಹಾಹಾಕಾರದಿಂದ ಬಸವಳಿದಿದ್ದ ಜನತೆ ನೆಮ್ಮದಿಯ ನಿಟ್ಟಿಸಿರು ಬಿಡುತ್ತಿದ್ದಾರೆ.

Exit mobile version