Kundapra.com ಕುಂದಾಪ್ರ ಡಾಟ್ ಕಾಂ

ತ್ರಾಸಿ: ಹೋಮ್‌ ಅಪ್ಲಯನ್ಸ್‌ಸ್‌ ಶೋರೂಮ್‌ಗೆ ಬೆಂಕಿ, ಲಕ್ಷಾಂತರ ರೂ. ನಷ್ಟ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಂಬಾ ಟಿವಿ ಸೆಂಟರ್‌ ಹಾಗೂ ಹೋಮ್‌ ಅಪ್ಲಯನ್ಸ್‌ಸ್‌ ಶೋರೂಮ್‌ನ ಒಳಭಾಗದಿಂದ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಸಂಜೆಯ ಬಳಿಕ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ತಲುಕಿರುವ ಶಂಕೆಯಿದ್ದು, ಶೋರೂಮ್ ಒಳಗಿದ್ದ ವಸ್ತುಗಳು ಬಹುಪಾಲು ಸುಟ್ಟು ಹೋಗಿವೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ತಡರಾತ್ರಿಯ ತನಕವೂ ಹರಸಾಹಸಪಟ್ಟಿದ್ದಾರೆ.

ಭಾನುವಾರ ರಜೆ ಇದ್ದುದರಿಂದ ಬೆಂಕಿ ಇದ್ದಿರುವುದು ತಡವಾಗಿ ತಿಳಿದುಬಂದಿದೆ. ಅಷ್ಟರಲ್ಲಿ ಶೋರೂಮ್‌ ಒಳಭಾಗದಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟ ಸಂಬಂಧಿಸಿದೆ. ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಗೆ ನೈಜ ಕಾರಣ ಹಾಗೂ ನಷ್ಟದ ನಿಖರ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

Exit mobile version