Kundapra.com ಕುಂದಾಪ್ರ ಡಾಟ್ ಕಾಂ

ಮಳೆಗಾಲದಲ್ಲಿ ಸೊಳ್ಳೆಗಳಿಂದ ದೂರವಿಡಲು ಹೀಗೆ ಮಾಡಿ

ಕುಂದಾಪ್ರ ಡಾಟ್ ಕಾಂ ಲೇಖನ.
ತಲೆ ಕೂದಲಿಗೆ ಮತ್ತು ಚರ್ಮಕ್ಕೆ ಜನರು ತೆಂಗಿನೆಣ್ಣೆಯನ್ನು ಹಚ್ಚಿಕೊಳ್ಳುತ್ತಾರೆ.  ಆದರೆ ಸೊಳ್ಳೆಗಳನ್ನು ದೂರವಿಡುವಲ್ಲಿ  ಸಹ ಕೊಬ್ಬರಿ ಎಣ್ಣೆಯ ಬಳಕೆಯು ತುಂಬಾ ಸಹಾಯ ಮಾಡುತ್ತೆ. ತೆಂಗಿನ ಎಣ್ಣೆಯಿಂದ ಸೊಳ್ಳೆಗಳನ್ನು ದೂರವಿಡೋದು ಹೇಗೆ ಅನ್ನೋ ಸುಲಭ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ.

ತೆಂಗಿನೆಣ್ಣೆಯಿಂದ  ಲೋಷನ್ ತಯಾರಿಸಿ:
ತೆಂಗಿನೆಣ್ಣೆಯಿಂದ ಸೊಳ್ಳೆ ನಿವಾರಕ ಲೋಷನ್ ತಯಾರಿಸೋದು ತುಂಬಾನೆ ಸುಲಭ. ಇದು ಸೊಳ್ಳೆ ಹತ್ತಿರವೂ ಬರದಂತೆ ನೋಡಿಕೊಳ್ಳುತ್ತೆ. ಅದಕ್ಕಾಗಿ ಮೊದಲು ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ. ಎಣ್ಣೆ ಗಟ್ಟಿಯಾಗಿದ್ದರೆ, ಅದನ್ನು ಕಡಿಮೆ ಉರಿಯಲ್ಲಿ ಕರಗಿಸಿ. ಈಗ ಕೊಬ್ಬರಿ ಎಣ್ಣೆಯಲ್ಲಿ ನಿಮ್ಮ ನೆಚ್ಚಿನ ಎಸ್ಸೇನ್ಸಿಯಲ್ ಆಯಿಲ್  ಬೆರೆಸಿ, ಅದು ಯಾವುದೇ ಪರಿಮಳ ಇದ್ದರೂ ಒಳ್ಳೆಯದು. ಇದು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡುತ್ತೆ. ಅದನ್ನು ಸ್ಪೂನ್ನಿಂದ ಕಲಕಿ ಮತ್ತು ಎಣ್ಣೆ ದಪ್ಪಗಾದ ನಂತರ, ಅದನ್ನು ಬಾಟಲಿನಲ್ಲಿ ತುಂಬಿಸಿಡಿ.

ತೆಂಗಿನೆಣ್ಣೆ ಲೋಷನ್ ಹಚ್ಚುವ ಪ್ರಯೋಜನಗಳು:
ತೆಂಗಿನೆಣ್ಣೆ ಲೋಷನ್ ಹಚ್ಚೋದರಿಂದ ಸೊಳ್ಳೆಗಳು ನಿಮ್ಮ ಸುತ್ತಲೂ ಅಲೆದಾಡೋದನ್ನು ತಪ್ಪಿಸಬಹುದು. ವಾಸ್ತವವಾಗಿ, ಸೊಳ್ಳೆಗಳು ತೆಂಗಿನ ಲೋಷನ್ ನ ವಾಸನೆಯಿಂದ ದೂರವಿರಲು ಇಷ್ಟಪಡುತ್ತವೆ. ಲೋಷನ್ ನಲ್ಲಿರುವ ಎಸೆನ್ಷಿಯಲ್ ಆಯಿಲ್ ಸೊಳ್ಳೆಗಳನ್ನು ದೂರ ಇರಿಸುತ್ತೆ.

ತೆಂಗಿನ ಲೋಷನ್  ಹಚ್ಚೋದರಿಂದ ಸೊಳ್ಳೆಗಳು ನಿಮ್ಮಿಂದ ದೂರವಿರುತ್ತವೆ ಮತ್ತು ಸೊಳ್ಳೆಗಳಿಂದ ಉಂಟಾಗುವ ರೋಗಗಳನ್ನು ಸಹ ನೀವು ತಪ್ಪಿಸಲು ಸಾಧ್ಯವಾಗುತ್ತೆ. ಹಾಗಾಗಿ, ತೆಂಗಿನ ಲೋಷನ್ ಹಚ್ಚೋದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ.

ಡಾರ್ಕ್ ಸರ್ಕಲ್  ತೊಡೆದುಹಾಕಲು:
ತೆಂಗಿನ ಲೋಷನ್ ನ ಬಳಕೆಯು ಕಣ್ಣುಗಳ ಕೆಳಗಿನ ಡಾರ್ಕ್ ಸರ್ಕಲ್ ತೆಗೆದುಹಾಕಲು ಪರಿಣಾಮಕಾರಿ.  ಹತ್ತಿಯಲ್ಲಿ ತೆಂಗಿನಕಾಯಿ ಲೋಷನ್ ತೆಗೆದುಕೊಳ್ಳಿ ಮತ್ತು ಅದನ್ನು ಡಾರ್ಕ್ ಸರ್ಕಲ್ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ತೆಂಗಿನ ಲೋಷನ್ ನಿಮ್ಮ ಡಾರ್ಕ್ ಸರ್ಕಲ್ಗಳನ್ನು ಕಡಿಮೆ ಮಾಡುತ್ತೆ. ಅಲ್ಲದೆ, ಈ ಲೋಷನ್ ಗರ್ಭಧಾರಣೆಯ ನಂತರ ಹೊಟ್ಟೆಯಿಂದ ಸ್ಟ್ರೆಚ್ ಮಾರ್ಕ್ ತೆಗೆದುಹಾಕಲು ಸಹ ಬಳಸಬಹುದು. ಇದು ಉತ್ತಮ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತೆ.

ಚರ್ಮದ ಆರೈಕೆಯಲ್ಲಿ  ಬಳಸಿ:
ತೆಂಗಿನೆಣ್ಣೆ ಲೋಷನ್ ನಿಮ್ಮ ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ. ಹಾಗಾಗಿ ನೀವು ಚರ್ಮದ ಡ್ರೈ ನೆಸ್ ನಿಂದ ಪರಿಹಾರ ಪಡೆಯಬಹುದು. ಅಲ್ಲದೆ, ತೆಂಗಿನ ಲೋಷನ್ ನ ಬಳಕೆಯು ಉಗುರುಗಳ ವಿಶೇಷ ಆರೈಕೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ತೆಂಗಿನೆಣ್ಣೆ ಲೋಷನ್ ಹಚ್ಚೋದರಿಂದ ಉಗುರುಗಳು ಬಲವಾಗಿ ಮತ್ತು ಆರೋಗ್ಯಕರವಾಗಿರಿಸುತ್ತೆ.

ಮೇಕಪ್  ರಿಮೂವರ್  ಆಗಿ ಬಳಸಿ:
ತೆಂಗಿನ ಲೋಷನ್ ನಿಮ್ಮ ಚರ್ಮಕ್ಕೆ ಅತ್ಯುತ್ತಮ ಮೇಕಪ್ ರಿಮೂವರ್ ಆಗಿ ಕೆಲಸ ಮಾಡುತ್ತೆ. ಲೋಷನ್ ನಲ್ಲಿ ಹತ್ತಿಯನ್ನು ಅದ್ದಿ, ನೀವು ನಿಮ್ಮ ಮೇಕಪ್ ಅನ್ನು ಸುಲಭವಾಗಿ ತೆಗೆದುಹಾಕೋದು ಮಾತ್ರವಲ್ಲದೆ ಮೇಕಪ್ ನ ಅಡ್ಡಪರಿಣಾಮಗಳಿಂದ ಚರ್ಮವನ್ನು ರಕ್ಷಿಸುವ ಮೂಲಕ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸಬಹುದು.
                            

Exit mobile version