Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ತಲ್ಲೂರಿನಲ್ಲಿ ಭಗವಧ್ವಜ ಕಿತ್ತೆಸೆದವರ ವಿರುದ್ಧ ಭಾರಿ ಆಕ್ರೋಶ

ಕುಂದಾಪುರ: ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದೆನ್ನಲಾದ ಸ್ಥಳದಲ್ಲಿ ಹಾಕಲಾಗಿದ್ದ ಭಗವದ್ವಜವನ್ನು ವಿನಾಕಾರಣ ಕಿತ್ತೆಸೆದ ತಲ್ಲೂರು ಗ್ರಾಮಾಡಳಿತದ ಕ್ರಮವನ್ನು ಖಂಡಿಸಿ ಇಂದು ತಲ್ಲೂರು ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಕೋಟೆಬಾಗಿಲಿನ ಯುವಕರು ಇತ್ತೀಚೆಗೆ ಪಾರ್ತಿಕಟ್ಟೆ ಎಂಬಲ್ಲಿ ರಕ್ತೇಶ್ವರಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿದ್ದ ಭಗವದ್ವಜ ನೆಟ್ಟಿದ್ದರು. ಸೋಮವಾರ ಮಧ್ಯಾಹ್ನ ತಲ್ಲೂರು ಪಂಚಾಯಿತಿ ಗುಮಾಸ್ತರೊಬ್ಬರು ಈ ಬಾವುಟವನ್ನು ಕಿತ್ತಿದ್ದರೆನ್ನಲಾಗಿದೆ. ಪುನಃ ದ್ವಜ ನೆಟ್ಟಿದ್ದರೂ ತಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರೋರ್ವರ ಅಣತಿಯಂತೆ ಮತ್ತೆ ರಾತ್ರಿ ಕೀಳಲಾಗಿದೆ ಎಂದು ಕೆಲ ಯುವಕರು ಆರೋಪಿಸಿದ್ದಾರೆ. ಈ ಬಗ್ಗೆ ಮಂಗಳವಾರ ನಡೆದ ತಲ್ಲೂರು ಗ್ರಾಮಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೋ ಪೂರ್ವಾಪರ ಇಟ್ಟುಕೊಂಡು ಧ್ವಜವನ್ನು ಕಿತ್ತು ತಪ್ಪೆಸಗಿದವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹಿಂದೂ ಸಂಘಟನೆಯ ಯುವಕರು ಎಚ್ಚರಿಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಈ ನಡುವೆ ಸಾಮಾಜಿಕ ತಾಣಗಳಲ್ಲಿ ಭಗವಧ್ವಜ ಕಿತ್ತೆಸೆದಿರುವ ಬಗ್ಗೆ ಹಿಂದೂ ಪರ ಯುವಕರು ಭಾರಿ ಆಕ್ರೋಶ ಹೊರಗೆಡವಿದ್ದಾರೆ. ಅನಗತ್ಯವಾಗಿ ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಸರಿಯಲ್ಲ. ಇದು ಹೀಗೆಯೇ ಮುಂದವರಿದರೇ ನಾವುಗಳು ಕೈಕಟ್ಟಿ ಕೂರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

Talluru Bhagavadwaja through our issue2

Exit mobile version