Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ.

ಗಂಗೊಳ್ಳಿ: ವ್ಯಕ್ತಿ ಎಷ್ಟೇ ದೊಡ್ಡವನಾದರೂ ತಾಯ್ನೆಲ ಮತ್ತು ತಾಯಿ ಬಾಷೆಯನ್ನು ಮರೆಯಬಾರದು. ಕನ್ನಡ ಎನ್ನುವುದು ನಮ್ಮ ದಿನನಿತ್ಯದ ಬಳಕೆಯಲ್ಲಿ ಸರಾಗವಾಗಿ ಹರಿಯಬೇಕು. ಬಾಷೆಯ ಬಗೆಗೆ ಹೆಮ್ಮೆ ಇರಬೇಕೆ ಹೊರತು ಕೀಳರಿಮೆ ಸಲ್ಲದು. ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಶ್ವನಾಥ ಭಟ್ ಅವರು ಅಭಿಪ್ರಾಯ ಪಟ್ಟರು.

ಬೆಂಗಳೂರು ಹೋಟೆಲ್ ನ್ಯೂಸ್ ಮಾಸಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ಗಂಗೊಳ್ಳಿ ಘಟಕವು ಇಲ್ಲಿ ಹಮ್ಮಿಕೊಂಡಿದ್ದ 60ನೇ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಕೆ. ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಕಾರ‍್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ. ರವೀಂದ್ರ ಪಟೇಲ್,ನಾಗರಾಜ ಶೇರುಗಾರ್, ರಾಘವೇಂದ್ರ ಪೂಜಾರಿ, ಆನಂದ ಗಾಣಿಗ ,ಆಕಾಶ್ ಗಾಣಿಗ , ಭಾಸ್ಕರ, ಲಕ್ಷ್ಮಣ, ಗುರು, ನಾರಾಯಣ, ಮುಕುಂದ, ನಾಗರಾಜ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.ಸ.ವಿ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಕಾರ‍್ಯಕ್ರಮದ ಬಳಿಕ ಸಿಹಿತಿಂಡಿ ವಿತರಿಸಲಾಯಿತು.

Exit mobile version