Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಆರ್.ಎನ್.ಶೆಟ್ಟಿ ಪ.ಪೂ ಕಾಲೇಜಿನಲ್ಲಿ ಸಂವಹನ ಕಲೆಯ ಬಗ್ಗೆ ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
“ಸಂವಹನ ಕಲೆಯೆಂಬುದು ಔಪಚಾರಿಕವಾಗಿ ಮಾತನಾಡುವಾಗ ಮಾತ್ರವಲ್ಲ, ಅನೌಪಚಾರಿಕವಾಗಿ ದಿನನಿತ್ಯ ವ್ಯವಹರಿಸುವಾಗ ಸಭ್ಯತೆಯಿಂದ ಸಂಭೋದಿಸಿ ಮೃದು ಧಾಟಿಯಲ್ಲಿ ಮಾತನಾಡುವಾಗಲೂ ಮನಗಾಣಬೇಕಾದ ವಿಚಾರ” ಎಂದು ತೆಕ್ಕಟ್ಟೆಯ ಕಾಮಾಕ್ಷಿ ಫಾರ್ಮ್ಸ್ ನ ಉದಯೋನ್ಮುಖ ಕೃಷಿ ಉದ್ಯಮಿ ದಿವ್ಯಾ ನಾಯಕ್ ಹೇಳಿದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ಸಂವಹನ ಕಲೆ’ ಉಪನ್ಯಾಸದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆಯಾದ  ಜಯಶೀಲಾ ಪೈ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿನ ವಿಶಿಷ್ಟ ಪ್ರಯೋಗಗಳಿಗಾಗಿ ದಿವ್ಯಾ ನಾಯಕ್ ಇವರನ್ನು ಗೌರವಿಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ದೀಪ್ತಿ ಕೆ. ಇವರು ಧನ್ಯವಾದ ಸಲ್ಲಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿ.ಬಿ ಅವರು ಕಾರ್ಯಕ್ರಮ ನಿರೂಪಿಸಿದರು. 

Exit mobile version