Site icon Kundapra.com ಕುಂದಾಪ್ರ ಡಾಟ್ ಕಾಂ

ಸರ್ಕಾರಿ ಐಟಿಐ ಬಿದ್ಕಲ್‍ಕಟ್ಟೆ: ಉದ್ಯೋಗ ಮತ್ತು ಶಿಕ್ಷಣ ಮೇಳ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸರ್ಕಾರಿ ಐ ಟಿ ಐ ಬಿದ್ಕಲ್‍ಕಟ್ಟೆ ಇಲ್ಲಿಯ ಪ್ಲೇಸ್‍ಮೆಂಟ್ ವಿಭಾಗದ ವತಿಯಿಂದ ಉದ್ಯೋಗ ಮತ್ತು ಶಿಕ್ಷಣ ಮೇಳ ಕಾರ್ಯಕ್ರಮ ಜರುಗಿತು.

ಎಲೆಕ್ರ್ಟೋನಿಕ್‍, ಈಎಮ್, ಎಮ್‍ಆರ್‍ಎಸಿ, ಎಮ್ಎಮ್‍ವಿ, ಫೈಟರ್‍ ವೃತ್ತಿಯ ಹಿರಿಯ ತರಬೇತಿದಾರರು ಹಾಗೂ ಪೂರ್ವ ತರಬೇತಿದಾರರು ಭಾಗವಹಿದ್ದರು. ಪ್ರಾಚಾರ್ಯ ಗಂಗಾಧರಪ್ಪ ಅವರ ಮಾರ್ಗದರ್ಶನದಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತರಬೇತಿ ಅಧಿಕಾರಿ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಿರಿಯ ತರಬೇತಿ ಅಧಿಕಾರಿ ಮನೋಹರ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು .

 ಅಜಿತ್ ಆಚಾರ್ ನಿರೂಪಿಸಿದರು. ಸಿಬ್ಬಂದಿ ನೇತೃತ್ವದಲ್ಲಿ ಸಂದರ್ಶನ ಹಾಗೂ ಆಯ್ಕೆ ಪ್ರಕ್ರಿಯೆ ನಡೆಯಿತು.

Exit mobile version