ಬೈಂದೂರು: ಉಪ್ಪುಂದದಲ್ಲಿ ನಲವತ್ತು ಲಕ್ಷ ರೂಪಾಯಿ ಅನುದಾನದ ಅಂಬಾಗಿಲು ಹಳೇ ಎಂಬೆಸ್ಸಿ ರಸ್ತೆ ಹಾಗೂ ಮೀನುಗಾರಿಕಾ ನಬಾರ್ಡನ ಹದಿನೈದು ಲಕ್ಷ ಅನುದಾನದ ಮಡಿಕಲ್ ಉಪ್ಪುಂದ ಕಿರುಸೇತುವೆ ಸಹಿತ ರಸ್ತೆ ಕಾಮಗಾರಿಗೆ ಶಾಸಕ ಗೋಪಾಲ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. ಜಿಲ್ಲಾ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ, ಮಾಜಿ ಸದಸ್ಯ ಮದನ್‌ಕುಮಾರ್, ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ಗ್ರಾಪಂ ಸದಸ್ಯರಾದ ಐ.ನಾರಾಯಣ, ಸತೀಶ ಶೆಟ್ಟಿ, ಸುಮಿತ್ರಾ, ರಾಮಚಂದ್ರ ಖಾರ್ವಿ, ನಾರಾಯಣ ಖಾರ್ವಿ, ವೆಂಕಟರಮಣ ಖಾರ್ವಿ, ವಸುದೇವ ಪೂಜಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಗೋಕುಲ ಶೆಟ್ಟಿ, ಮುಂತಾದವರು ಹಾಜರಿದ್ದರು.