Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸರಸ್ವತಿ ವಿದ್ಯಾಲಯದ ವಾರ್ಷಿಕ ಸಂಚಿಕೆ ‘ದೃಷ್ಟಿ’ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಯಾವುದೇ ವಿದ್ಯಾಸಂಸ್ಥೆಯ ವಾರ್ಷಿಕ ಸಂಚಿಕೆಯು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಕಾರಣವಾಗುತ್ತದೆ ಸುಪ್ತ ಮನಸ್ಸಿನ ಭಾವನೆಗಳಿಗೆ ವೇದಿಕೆಯಾಗುತ್ತದೆ. ಶಿಕ್ಷಣವು ಉದ್ಯಮವಾಗುತ್ತಿರುವ  ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಶೂನ್ಯವಾಗುತ್ತಿದೆ ಇಂತಹ ಸಮಯದಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪಿಯು ಕಾಲೇಜಿನ ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ಹೊರಹೊಮ್ಮಿಸುವಲ್ಲಿ ಗಮನಾರ್ಹ ಕಾರ್ಯವಾಗಿದೆ ಎಂದು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ಹೇಳಿದರು.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 2023 – 24ನೇ ಸಾಲಿನ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕ ಸಂಚಿಕೆ ದೃಷ್ಟಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ. ಕಾಶಿನಾಥ್ ಪೈ, ಕಾಲೇಜಿನ  ಕಾರ್ಯದರ್ಶಿ ಎನ್. ಸದಾಶಿವ ನಾಯಕ್, ಹಿರಿಯ ಆಂಗ್ಲ ಭಾಷೆ ಉಪನ್ಯಾಸಕ ಥಾಮಸ್ ಪಿ.ಎ ಉಪಸ್ಥಿತರಿದ್ದರು. 

ವಿದ್ಯಾರ್ಥಿನಿ ಸೃಷ್ಟಿ ಸ್ವಾಗತಿಸಿದರು. ಭಾರತಿ ಪರಿಚಯಿಸಿದರು. ದೃಷ್ಟಿ ವಾರ್ಷಿಕ ಸಂಚಿಕೆ ನಿರ್ವಾಹಕ ಸಂಪಾದಕ ಸುಜಯೀಂದ್ರ ಹಂದೆ ಹೆಚ್. ಪ್ರಾಸ್ತಾವಿಕ ಮಾತುಗಳನಾಡಿದರು.

ಶ್ರೇಯಲ್ ವಂದಿಸಿದರು. ಗುರು ಚರಣ್ ವೈದ್ಯ ಕಾರ್ಯಕ್ರಮ ನಿರೂಪಿಸಿದರು

Exit mobile version