Kundapra.com ಕುಂದಾಪ್ರ ಡಾಟ್ ಕಾಂ

ಬವಳಾಡಿ ಸ.ಹಿ.ಪ್ರಾ. ಶಾಲೆಯ ರಂಗ ಮಂದಿರಕ್ಕೆ ಶಂಕುಸ್ಥಾಪನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬವಳಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಸಂಘದ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ನೂತನ ರಂಗಮಂದಿರದ ಶಂಕುಸ್ಥಾಪನೆಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉದ್ಯಮಿ ಗೋಕುಲ ಜಿ. ಶೆಟ್ಟಿ ಅವರು ನೆರವೇರಿತು.

ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿಯೂ ಆದ  ತಿರುಮಲೇಶ ಭಟ್ ಮಕ್ಕಿ ದೇವಸ್ಥಾನ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ರಘುರಾಮ ಶೆಟ್ಟಿ ಗೋಳಿಕಟ್ಟೆ, ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ರಾಘವೇಂದ್ರ ಗಾಣಿಗ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಆಚಾರಿ ಕಟ್ಟಿನಮಕ್ಕಿ, ಕೋಶಾಧಿಕಾರಿ ಶಂಕರಶೆಟ್ಟಿ ಗಾಯಾಡಿ, ಹಿರಿಯರಾದ ಸೂಲಿಯಣ್ಣ ಶೆಟ್ಟಿ, ಸಂಘದ ಕ್ರೀಡಾ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವಕೀಲರು ಗಂಟಿಹೊಳೆ, ಅರ್ಚಕರಾದ ಗಣಪತಿ ಭಟ್,ಎಸ್ ಡಿ ಎಂ. ಸಿ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯ ಎನ್ ಕೆ ಬಿಲ್ಲವ, ಅಧ್ಯಾಪಕ ವೃಂದ, ಪಾಲಕ ಪೋಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

Exit mobile version