Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲಾ ಯುವ ಕವಿ ಸಮ್ಮಿಲನ: ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿ ಪ್ರದಾನ

ಕುಂದಾಪುರ: ಇಲ್ಲಿನ ಕುಂದಪ್ರಭ ಪತ್ರಿಕೆ,  ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ) ಮಂಗಳೂರು, ಆಕಾಶವಾಣಿ ಮಂಗಳೂರು, ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ಸಹಯೋಗದೊಂದಿಗೆ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ಉಡುಪಿ ಜಿಲ್ಲಾ ಯುವ ಕವಿ ಸಮ್ಮೆಳನ ಹಾಗೂ ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮಾತನಾಡಿ, ಸತತ ಅಧ್ಯಯನಶೀಲತೆಯಿಂದ ಉತ್ತಮ ಕವಿತೆ ಮೂಡಿ ಬರಲು ಸಾಧ್ಯ. ಒಳ್ಳೆಯ ಭಾಷೆಯನ್ನು ಬಳಸುವ ಮೂಲಕ ಉತ್ತಮ ಕೃತಿಗಳನ್ನು ಮೂಡಿಸಲು ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ರಿ. ಇದರ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಮಾತನಾಡಿ, ಮಾನಸಿಕ ಸ್ಥಿಮಿತವನ್ನು ಕಾಯ್ದುಕೊಳ್ಳಲು ಸಾಹಿತ್ಯ ಮಹತ್ತರ ಪಾತ್ರ ವಹಿಸುತ್ತದೆ. ಬೇರೆ ಭಾಷೆಯ ತಿರುಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಬೇಕು ಒಟ್ಟಾರೆ ಕನ್ನಡವನ್ನು ಕಟ್ಟುವ ಕಾರ್ಯ ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ಉಪಸ್ಥಿತರಿದ್ದರು.

ಯುವ ಕವಿ ಸಮ್ಮಿಲನ ಹಾಗೂ ಕವಿಗೋಷ್ಟಿಯಲ್ಲಿ ಸರ್ವತಾ ಅಡಿಗ ಮಣೂರು, ಅಲ್ತಾರು ನಾಗರಾಜ, ಕೀರ್ತನಾ ಶೆಟ್ಟಿ, ಶೇಖರ ದೇವಾಡಿಗ ಮೊಗೇರಿ, ಗೀತಾ ಹೆಗ್ಡೆ, ಆದಿತ್ಯ ಪ್ರಸಾದ ಪಾಂಡೇಲು, ರಕ್ಷಿತ್, ಡ್ರೀಮಾ ಡಿ.ಸೋಜಾ, ವಿದ್ಯಾವತಿ ಕೆಂಚನೂರು, ಆನಂದ ಅಜೆಕಾರು ಅವರುಗಳು ತಮ್ಮ ಸ್ವರಚಿತ ಕವನ ವಾಚಿಸಿದರು.

ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿ ಪ್ರದಾನ:
ಯುವ ಕವಿ ಅಲ್ತಾರು ನಾಗರಾಜ್ ಅವರು ಈ ಬಾರಿಯ ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿಗೆ ಭಾಜನರಾದರು. ಅವರಿಗೆ ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಆಕಾಶವಾಣಿಯ ಸದಾನಂದ ಹೊಳ್ಳ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುಂದಾಪುರದ ಶ್ರೀ ದೇವಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಭವಾನಿ ಆರ್. ರಾವ್ ಇದ್ದರು.

ಕುಂದಪ್ರಭದ ಯು.ಎಸ್.ಶೆಣೈ ಸ್ವಾಗತಿಸಿದರು. ಲೇಖಕ ಕೋ.ಶಿವಾನಂದ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.

Puttanna kulal award1

Exit mobile version