Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ರೋಟರಿಯಿಂದ ರತ್ತೂಬಾಯಿ ಪ್ರೌಢಶಾಲಾಗೆ ಇಂಟರ್ಯಾಕ್ಟಿವ್ ಡಿಜಿಟಲ್ ಬೋರ್ಡ್‌ ಕೊಡುಗೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಇಂದು ರೋಟರಿ ಮೂಲಕ ನಾವು ಮಾಡುವ ಸೇವೆ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಡಲಿದೆ ಎಂಬ ಹೆಮ್ಮ ನಮ್ಮದಾಗಿದೆ ಎಂದು ರೋಟರಿ ಝೋನ್1ರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ರೋಟರಿ ಕ್ಲಬ್ ಬೈಂದೂರು ವತಿಯಿಂದ ರತ್ತೂಬಾಯಿ ಜನತಾ ಪ್ರೌಢಶಾಲಾಗೆ ಕೊಡುಗೆಯಾಗಿ ನೀಡಿದ 1.40ಲಕ್ಷ ಮೌಲ್ಯದ ಇಂಟರ್ಯಾಕ್ಟಿವ್ ಡಿಜಿಟಲ್ ಬೋರ್ಡ್‌ಗೆ ಚಾಲನೆ ನೀಡಿ ಮಾತನಾಡಿ ಬೈಂದೂರು ರೋಟರಿ ನಿರಂತರವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಈ ಶಾಲೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಗುಣಾತ್ಮಕ ಕಲಿಕೆಗೆ ಪೂರಕ ವ್ಯವಸ್ಥೆ ಕಲ್ಪಿಸುವುದು ಶ್ಲಾಘನೀಯ ಎಂದರು.

ವಿವಿವಿ ಮಂಡಳಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ  ಅವರು ಮಾತನಾಡಿ ನಮಗಾಗಿ ಬದುಕುವುದು ಮಾತ್ರವಲ್ಲದೇ ಸಮಾಜಕ್ಕಾಗಿ ಬದುಕುವುದು ಮುಖ್ಯ. ಉದ್ಯಮ ಹಾಗೂ ಬದುಕಿನ ನಿರಂತರ ಹೋರಾಟದ ನಡುವೆಯೂ ಸಮಾಜ ಸೇವೆಗಾಗಿ ಸಮಯ ಮೀಸಲಿಡುವವರು ನಿಜಕ್ಕೂ ಮಾದರಿ ವ್ಯಕ್ತಿಗಳು ಎಂದರು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ ಸೇನಾನಿ ರಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ರತ್ತೂಬಾಯಿ ಜನತಾ ಪ್ರೌಢಶಾಲೆಯ ವತಿಯಿಂದ ಇಂಟರ್ಯಾಕ್ಟಿವ್ ಡಿಜಿಟಲ್ ಬೋರ್ಡ್‌ ದೇಣಿಗೆಯಾಗಿ ನೀಡಿದ ಪ್ರಸಾದ್‌ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ‌ ವಂದಿಸಿದರು. ಶಿಕ್ಷಕ ಪ್ರಕಾಶ್ ಮಾಕೋಡಿ ಕಾರ್ಯಕ್ರಮ ನಿರೂಪಿಸಿದರು.

Exit mobile version