Kundapra.com ಕುಂದಾಪ್ರ ಡಾಟ್ ಕಾಂ

ಡಾ| ಬಿ.ಬಿ. ಹೆಗ್ಡೆ ಕಾಲೇಜು: ಬ್ಯಾಂಕ್ ಬ್ಯಾಟಲ್ 2.0 ಅಂತರ್- ತರಗತಿವಾರು ಸ್ಪರ್ಧೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳಿಗೆ ನೂತನ ಬ್ಯಾಂಕಿಂಗ್ ಪದ್ಧತಿ ಮತ್ತು ಅನುಸರಿಸಿಕೆಯ ಕುರಿತು ಪ್ರಾಯೋಗಿಕ ಜ್ಞಾನ ನೀಡುವ ನಿಟ್ಟಿನಲ್ಲಿ ‘ಬ್ಯಾಂಕ್ ಬ್ಯಾಟಲ್ 2.0” ಎಂಬ ಅಂತರ್-ತರಗತಿವಾರು ಸ್ಪರ್ಧೆ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೋಟಾ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಇವರು ಮಾತನಾಡಿ, ಆಧುನಿಕ ಬ್ಯಾಂಕಿಂಗ್ ಪದ್ಧತಿಯ ಅಳವಡಿಕೆಯಿಂದ ಉದ್ಯೋಗ ಕೇಂದ್ರದ ಮೇಲೆ ಆಗುವ ಪರಿಣಾಮದ ಕುರಿತು ಮಾತನಾಡಿದರು.  

ಸಂಪನ್ಮೂಲ ವ್ಯಕ್ತಿಗಳಾದ ಸುನೀಲ್ ಎಸ್. ಮೊಗವೀರ, ಗ್ರಾಹಕ ಸೇವಾ ಸಹವರ್ತಿ, ಕೆನರಾ ಬ್ಯಾಂಕ್ ಭಟ್ಕಳ ಇವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಗಳಿಸುವಲ್ಲಿ, ವಾಣಿಜ್ಯ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿರಬೇಕು ಎಂದರು ಕಾರ್ಯಕ್ರಮದ ಸಂಯೋಜಕರಾದ ಶರತ್ ಕುಮಾರ್ ಹಾಗೂ ಅಕ್ಷಯ್ ಕುಮಾರ್ ಉಪಸ್ಥಿತರಿದ್ದರು. 

ಕೃತಕ ಬ್ಯಾಂಕ್ ನಿರ್ಮಾಣ ಹಾಗೂ ಬ್ಯಾಂಕಿಂಗ್ ವ್ಯವಹಾರ ನಿರ್ವಹಣೆಯ ಅರಿವಿನ ಕುರಿತು ಆಯೋಜಿಸಿದ ಬ್ಯಾಂಕ್ ಬ್ಯಾಟಲ್ 2.0 ಇದರ ಸಮಗ್ರ ವಿಜೇತ ಪ್ರಶಸ್ತಿ ಪ್ರಥಮ ಬಿ.ಕಾಂ. ‘ಸಿ’ ಗಳಿಸಿದರೆ ದ್ವಿತೀಯ ಬಹುಮಾನ ಪ್ರಥಮ ಬಿ.ಕಾಂ. ‘ಬಿ’ಪಡೆದುಕೊಂಡರು.  

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಸ್ವಾಗತಿಸಿ, ವಾಣಿಜ್ಯ ಪ್ರಾಧ್ಯಾಪಕರಾದ ಪ್ರೀತಿ ಹೆಗ್ಡೆ ವಂದಿಸಿ, ಸತೀಶ್ ಶೆಟ್ಟಿ ಹೆಸ್ಕತ್ತೂರು ವಿಜೇತರ ಪಟ್ಟಿ ವಾಚಿಸಿದರು. 

ವಿದ್ಯಾರ್ಥಿಗಳಾದ ಶ್ರೇಯಾ ಖಾರ್ವಿ ಪ್ರಾರ್ಥಿಸಿ, ಪ್ರಿಯಾಂಕಾ ಅತಿಥಿಗಳನ್ನು ಪರಿಚಯಿಸಿ, ಸೌಭಾಗ್ಯ ಕಿಣಿ ನಿರೂಪಿಸಿದರು.

Exit mobile version