Kundapra.com ಕುಂದಾಪ್ರ ಡಾಟ್ ಕಾಂ

ತ್ರಾಸಿ: ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಬೈಂದೂರು ಬಿಜೆಪಿ ಯುವಮೋರ್ಚಾ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಹಿಂದೂ ಧರ್ಮ ಎಂದರೆ ಹಿಂಸಾವಾದಿಗಳು ಮೊದಲಾದ ಆರೋಪಮಾಡಿದ್ದು ಇದು ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಸಂಸದ ರಾಹುಲ್ ಗಾಂಧಿ ಅವರು ಈ ಕೂಡಲೇ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು ಮತ್ತು ಹಿಂದೂ ಧರ್ಮದ ಜನತೆಯ ಕ್ಷಮೆಯನ್ನು ಯಾಚಿಸಬೇಕು ಎಂದು ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ. ಎಸ್ ಬೇಲೆಮನೆ ಆಗ್ರಹಿಸಿದರು.

ತ್ರಾಸಿಯಲ್ಲಿ ಬೈಂದೂರು ಬಿಜೆಪಿ ಯುವಮೋರ್ಚಾ ಪ್ರತಿಭಟನೆ ವತಿಯಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಸುಧಾಕರ್ ಶೆಟ್ಟಿ ನೆಲ್ಯಾಡಿ ಮೊದಲಾದವರು ಈ ವೇಳೆ ಮಾತನಾಡಿ ಕೇಂದ್ರದ ಪ್ರತಿಪಕ್ಷ ನಾಯಕನ ಹೇಳಿಕೆಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಂಡಲ ಉಪಾಧ್ಯಕ್ಷರಾದ ರಾಘವೇಂದ್ರ ನೆಂಪು, ಪ್ರವೀಣ್ ಕೊಡ್ಲಾಡಿ, ಬೈಂದೂರು ಮಹಿಳಾಮೋರ್ಚ ಅಧ್ಯಕ್ಷೆ ಶ್ಯಾಮಲ ಕುಂದರ್ , ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಅನಿತಾ ಆರ್ ಕೆ, ಮಾಜಿ ಜಿ. ಪ ಸದಸ್ಯೆ ಶೋಭಾ ಪುತ್ರನ್, ಪ್ರೇಮಾ, ರವಿ ಖಾರ್ವಿ ಹೊಸಪೇಟೆ, ಮಿಥುನ್ ದೇವಾಡಿಗ, ಮಂಡಲ ಕಾರ್ಯದರ್ಶಿ ಕರಣ್ ಪೂಜಾರಿ, ಮೋಹನ ಗುಜ್ಜಾಡಿ, ಹರೀಶ್ ಮೇಸ್ತ, ರವಿ ಗಾಣಿಗ, ಬಿಜೆಪಿ SC ಮೋರ್ಚಾ ಅಧ್ಯಕ್ಷ ಅಶೋಕ್ ಎನ್ ಡಿ, ಒಬಿಸಿ ಮೋರ್ಚಾ ಪ್ರಧಾನಕಾರ್ಯದರ್ಶಿ ಮಂಜುನಾಥ್ ದೇವಾಡಿಗ, ರಾಜಶೇಖರ್ ದೇವಾಡಿಗ, ಯುವಮೋರ್ಚಾ ಉಪಾಧ್ಯಕ್ಷರು ವೇಣುಗೋಪಾಲ್ ಅಜ್ರಿ, ಜಗದೀಶ್ ಆಲಂದೂರ್, ಜಯಂತ್ ಗಂಗೊಳ್ಳಿ, ರಾಜೇಶ್ ಎಲ್ ಪಿ, ನವೀನ್ ಕಾಂಚನ್, ಯುವ ಮೋರ್ಚಾ ಕಾರ್ಯದರ್ಶಿಗಳಾದ ಪ್ರಸಾದ ಪಿ ಉಪಸ್ಥಿತರಿದ್ದರು.

Exit mobile version