Kundapra.com ಕುಂದಾಪ್ರ ಡಾಟ್ ಕಾಂ

ಕುಂಭಾಶಿ: ಬಸ್ ಡಿಕ್ಕಿಯಾಗಿ ಸೈಕಲ್ ಸವಾರ ಕೃಷ್ಣ ಶೆಟ್ಟಿಗಾರ್ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸೈಕಲ್ ಸವಾರನಿಗೆ ಕುಂಭಾಶಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಸರಕಾರಿ ಬಸ್ಸೊಂದು ಢಿಕ್ಕಿಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಜೆಯ ವೇಳೆಗೆ ವರದಿಯಾಗಿದೆ. ವಕ್ವಾಡಿ ನಿವಾಸಿ ಕೃಷ್ಣ ಶೆಟ್ಟಿಗಾರ್ (55) ಮೃತ ದುರ್ದೈವಿ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಎಂದಿನಂತೆ ಕೃಷ್ಣ ಶೆಟ್ಟಿಗಾರಿ ದಿನಗೂಲಿ ಕೆಲಸ ಮುಗಿಸಿಕೊಂಡು ಕುಂಭಾಶಿಯಿಂದ ಕನ್ನುಕೆರೆಯತ್ತ ತೆರಳುತ್ತಿದ್ದ ವೇಳೆಗೆ ಮಂಗಳೂರಿನಿಂದ ಸಿಂಧಗಿ ಕಡೆಗೆ ತೆರಳುತ್ತಿದ್ದ ಬಸ್ಸು ಎದುರಿನಿಂದ ಡಿಕ್ಕಿ ಹೊಡೆದಿದ್ದಲ್ಲದೇ, ಸ್ವಲ್ಪ ದೂರದ ವರೆಗೆ ಎಳೆದೊಯ್ದಿತ್ತು. ಅಪಘಾತದ ತೀವ್ರತೆಗೆ ಗಾಯಾಳು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬದ ಆಧಾರಸ್ಥಂಭವಾಗಿದ್ದ ಕೃಷ್ಣ ಶೆಟ್ಟಿಗಾರ್ ಅವರ ಸಾವು ಪತ್ನಿ ಲೀಲಾವತಿ ಹಾಗೂ ಪುತ್ರಿ ಪವಿತ್ರಾಳನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

Bus Cycle Accident at Kumbashi Kundapura taluk (2)

Exit mobile version