ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವೈದ್ಯೋ ನಾರಾಯಣ ಹರಿ ಎಂಬ ವಾಕ್ಯ ಇಂದಿಗೂ ಪ್ರಸ್ತುವಾಗಿದ್ದು ದೇವರ ನಂತರ ಜನರು ವೈದ್ಯರನ್ನು ತಮ್ಮ ಕಾಯಿಲೆ ಗುಣಪಡಿಸುವ ದೇವರಂತೆಯೇ ನೋಡುತ್ತಾರೆ ಎಂದು 2024-25ನೇ ಸಾಲಿನ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಹೇಳಿದರು.
ವೈದ್ಯರ ದಿನಾಚರಣೆ ಅಂಗವಾಗಿ ಬೈಂದೂರು ರೋಟರಿ ವತಿಯಿಂದ ವಿವಿಧೆಡೆ ಹಮ್ಮಿಕೊಳಲಾಗಿದ್ದ ವೈದ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಬೈಂದೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ್, ವೈದ್ಯೆ ಹಾಗೂ ಬೈಂದೂರು ರೋಟರಿ ಸದಸ್ಯರಾದ ಡಾ. ನಂದಿನಿ, ವೈದ್ಯರುಗಳಾದ ಡಾ. ನಿವೇದಿತಾ, ಡಾ. ಜೈಮಿನಿ, ಡಾ. ವತ್ಸಲಾ, ಡಾ. ಆರ್. ಸಿ. ಪಾಟೀಲ್, ಹಿರಿಯ ವೈದ್ಯರುಗಳಾದ ಡಾ. ಎಂ. ಎಸ್. ಶೆಟ್ಟಿ, ಡಾ. ಕೆ. ಆರ್. ನಂಬಿಯಾರ್, ಡಾ. ಸುಧಾಕರ ಹೆಗ್ಡೆ, ಡಾ. ಪ್ರವೀಣ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬೈಂದೂರು ರೋಟರಿ ಕಾರ್ಯದರ್ಶಿ ಸುನಿಲ್ ಹೆಚ್.ಜಿ., ಈ ವೇಳೆ ಹಿರಿಯ ರೊಟೇರಿಯನ್ ಐ. ನಾರಾಯಣ ಉಪಸ್ಥಿತರಿದ್ದರು.