Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ಮನೆ ಮೇಲೆ ಗುಡ್ಡ ಜರಿದು ಬಿದ್ದು ಮಹಿಳೆ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೊಲ್ಲೂರು:
ಮನೆಗೆಲಸಕ್ಕೆಂದು ತೆರಳಿದ್ದ ಮಹಿಳೆ ಮೇಲೆ ಏಕಾಏಕಿ ಗುಡ್ಡ ಕುಸಿದ ಪರಿಣಾಮ ಅವರು ಸಾವನ್ನಪ್ಪಿದ ಘಟನೆ ಕೊಲ್ಲೂರು ಗ್ರಾಮದ ಸೊಸೈಟಿಗುಡ್ಡೆ ಎಂಬಲ್ಲಿ ನಡೆದಿದೆ. ಹಳ್ಳಿಬೇರು ನಿವಾಸಿ ಅಂಬಾ (55) ಮೃತ ದುರ್ದೈವಿ.

ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಗುರುವಾರ ಸಂಜೆಯ ವೇಳೆಗೆ ಗುಡ್ಡದ ಒಂದು ಪಾರ್ಶ್ವ ಜರಿದು ಬಲಭಾಗಕ್ಕೆ ಅಪ್ಪಳಿಸಿದೆ. ಈ ವೇಳೆ ಸೊಸೈಟಿಗುಡ್ಡೆಯ ಮನೆಯೊಂದರಲ್ಲಿ ಕೂಲಿ ಕೆಲಸಕ್ಕಾಗಿ ತೆರಳಿದ್ದ ಮಹಿಳೆಯ ಮೇಲೆಯೇ ಗುಡ್ಡ ಕುಸಿದು ಬಿದ್ದಿದೆ. ಮಣ್ಣಿನಡಿ ಸಿಲುಕಿದ ಅವರು ಉಸುರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳೀಯರ ಸಹಾಯದಿಂದ ಮಣ್ಣು ಸರಿಸಿ ಮೃತ ದೇಹ ಮೇಲಕ್ಕೆತ್ತಲಾಗಿದೆ.

ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version