Kundapra.com ಕುಂದಾಪ್ರ ಡಾಟ್ ಕಾಂ

ಜುಲೈ 10ರಂದು ರೋಟರಿ ಕ್ಲಬ್ ಬೈಂದೂರು ಪದಪ್ರದಾನ ಸಮಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ರೋಟರಿ ಕ್ಲಬ್ ಬೈಂದೂರು ಇದರ 2024-25ನೇ ಸಾಲಿನ ಪದಪ್ರದಾನ ಸಮಾರಂಭವು ಜುಲೈ 10ರ ಬುಧವಾರ ಸಂಜೆ 7 ಗಂಟೆಗೆ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಜರುಗಲಿದೆ.

ರೋಟರಿ ಜಿಲ್ಲಾ ಗವರ್ನರ್ ನಾಮಿನಿ ಬಿ.ಎಂ. ಭಟ್ ಅವರು ಬೈಂದೂರು ರೋಟರಿ ನೂತನ ಅಧ್ಯಕ್ಷ ಮೋಹನ್ ರೇವಣ್ಕರ್ ಅವರಿಗೆ ಪ್ರದಪ್ರದಾನ ಮಾಡಲಿದ್ದಾರೆ. ಸಹಾಯಕ ಗವರ್ನರ್ ಡಾ. ಬಿ. ರಾಜೇಂದ್ರ ಶೆಟ್ಟಿ ಅವರು ಬಿಂದುವಾಣಿ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಈ ವೇಳೆ ಅತಿಥಿಗಳಾಗಿ ಸಾಹಿತಿ ಶ್ರೀಧರ್ ಶೇಟ್ ಶಿರಾಲಿ, ರೋಟರಿ ವಲಯ ಸೇನಾನಿ ಪ್ರದೀಪ್ ಡಿ.ಕೆ ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Exit mobile version