Kundapra.com ಕುಂದಾಪ್ರ ಡಾಟ್ ಕಾಂ

ನಾಟಾ ಫಲಿತಾಂಶ: ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ಆಧ್ಯಾಳಿಗೆ 195 ನೇ ರ್ಯಾಂಕ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ: 
ರಾಷ್ಟ್ರೀಯ ಮಟ್ಟದಲ್ಲಿ ನಡೆದ NATA ಪ್ರವೇಶ ಪರೀಕ್ಷೆ ನ್ಯಾಷನಲ್  ಆಪ್ಟಿಟ್ಯೂಡ್ ಟೆಸ್ಟ್  ಇನ್ ಆರ್ಕಿಟೆಕ್ಚರ್  ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ  ಆಧ್ಯಾ. ಎಸ್ ರಾಜ್ಯಕ್ಕೆ 195ನೇ ರ್ಯಾಂಕ್‌ ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ.

ಈ ಮೂಲಕ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ  ಪಡೆಯಲು  ಅರ್ಹತೆ ಪಡೆದಿರುತ್ತಾಳೆ.

ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿಗಳು  ಅಭಿನಂದನೆ  ಸಲ್ಲಿಸಿದ್ದಾರೆ.

Exit mobile version