Kundapra.com ಕುಂದಾಪ್ರ ಡಾಟ್ ಕಾಂ

ನ.14-15: ಪ್ರೇರಣಾ ಯುವ ವೇದಿಕೆಯಿಂದ ರೈತರಿಗಾಗಿ ‘ಪ್ರೇರಣಾ ನೇಗಿಲ ಯೋಗಿ-2015’

ಕುಂದಾಪುರ: ತಾಲೂಕಿನ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರು, ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಕುಂದಾಪುರದ ಸಹಯೋಗದೊಂದಿಗೆ ನ.14,15ರಂದು ರೈತರಿಗಾಗಿ ‘ಪ್ರೇರಣಾ ನೇಗಿಲ ಯೋಗಿ-2015’ ಎಂಬ ಕಾರ್ಯಕ್ರಮವನ್ನು ಚಿತ್ತೂರಿನ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೆ. ಕಿಸಾನ್ ಕಾರ್ಡ್ ನೋಂದಣಿ ಭತ್ತ, ಅಡಿಕೆ, ತೆಂಗು, ಧಾನ್ಯ ಸೇರಿದಂತೆ ವಿವಿಧ ಬೆಳೆಗಳಿಗೆ ಸುರಕ್ಷಿತ ಕೀಟನಾಶಕ ಬಳಕೆ ಕುರಿತಾಗಿ ತರಬೇತಿ ಕಾರ್ಯಾಗಾರ ನಡೆಯಲಿದೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರೇರಣಾ ಯುವ ವೇದಿಕೆ ಹಮ್ಮಿಕೊಂಡ ಕಾರ್ಯಕ್ರಮ ರೈತರಿಗೆ ಉಪಯುಕ್ತವಾಗಿದ್ದು, ಚಿತ್ತೂರು, ಮಾರಣಕಟ್ಟೆ, ಹೊಸೂರು, ಕೆರಾಡಿ, ಆಲೂರು, ಕಳಿ, ಹಿಜಾಣ ಇಡೂರು, ಜಡ್ಕಲ್ ಭಾಗದ ರೈತರು ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರೇರಣಾ ಯುವ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಕಿಸಾನ್ ಕಾರ್ಡ್ ಪ್ರಯೋಜನಗಳು:
* ಸಬ್ಸೀಡಿ ಮತ್ತು ಬೆಳೆ ಸಾಲ ಪಡೆಯಲು ಪದೇ ಪದೇ RTC ಕೊಡುವ ಅಗತ್ಯವಿಲ್ಲ
* ಇದು ಸರ್ಕಾರದ ಸೌಲಭ್ಯಗಳು ನೇರವಾಗಿ ಪಡೆಯುವ ಐಡಿ ಕಾರ್ಡ್’ನಂತೆ ಬಳಕೆಯಾಗುತ್ತದೆ
* ಕೃಷಿಯಂತ್ರಗಳ ಸಬ್ಸೀಡಿಯನ್ನು ನೇರವಾಗಿ ಪಡೆದುಕೊಳ್ಳಲು
* ಹವಾಮಾನ ಮತ್ತು ಬೆಳೆಗಳ ಬಗೆಗಿನ ಮುನ್ನೆಚ್ಚೆರಿಕೆಯನ್ನು ಮೊಬೈಲ್ ಗೆ ನೇರ ಸಂದೇಶ ಪಡೆಯಲು.
* ಕೃಷಿ ಇಲಾಖೆಯ ಯೋಜನೆಗಳನ್ನು ನೇರ ಮಾಹಿತಿ ಪಡೆಯಲು

ನೊಂದಣಿಗೆ ಅಗತ್ಯ ದಾಖಲೆಗಳು
* ಮತದಾರರ ಗುರುತಿನ ಚೀಟಿ
* ಆಧಾರ್ ಕಾರ್ಡ್
* ಆರ್.ಟಿ.ಸಿ ನಕಲು
* ಪಡಿತರ ಚೀಟಿ
* ಎರಡು ಭಾವಚಿತ್ರ
* ಬ್ಯಾಂಕ್ ಪಾಸ್ ಪುಸ್ತಕ

Exit mobile version