Kundapra.com ಕುಂದಾಪ್ರ ಡಾಟ್ ಕಾಂ

ರೈಲು ಸೌಲಭ್ಯ ಜನರಿಗೆ ಸಿಗದಿರಲು ಜನಪ್ರತಿನಿಧಿಗಳ ವೈಪಲ್ಯವೇ ಕಾರಣ: ಕಲ್ಲಾಗರ್

ಬೈಂದೂರು: ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಖಾಸಗೀ ಬಸ್ಸು ಮಾಲಕರ ಅಪವಿತ್ರ ಮೈತ್ರಿಯಿಂದಾಗಿ ಜನರು ರೈಲುಗಳ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜನರಿಗೆ ರೈಲು ಸೌಲಭ್ಯ ಸಿಗದಿರಲು ಜನಪ್ರತಿನಿಧಿಗಳ ವೈಪಲ್ಯವಾಗಿದೆ. ಜಿಲ್ಲೆಯಲ್ಲಿ 35 ಸಾವಿರ ಸಹಿ ಸಂಗ್ರಹ ಮಾಡಿ ರೈಲು ಬೇಡಿಕೆ ಈಡೇರಿಸಲು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಮುಂದೆ ಹಂತಹಂತವಾಗಿ ತೀವ್ರ ತೆರನಾದ ಹೋರಾಟಗಳನ್ನು ಸಿಪಿಐ(ಎಂ) ಪಕ್ಷ ನಡೆಸಲಿದೆ ಎಂದು ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ಕಲ್ಲಾಗರ ಹೇಳಿದರು.

ಅವರು ಬೈಂದೂರಿನಲ್ಲಿ ನಡೆದ ಕಾರವಾರ-ಬೆಂಗಳೂರು ರೈಲು ವೇಗ ಹೆಚ್ಚಳಕ್ಕಾಗಿ ಹಾಗೂ ಬೆಂಗಳೂರಿಗೆ ಮತ್ತೊಂದು ರೈಲು ಆರಂಭಿಸಲು ಒತ್ತಾಯಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಿಪಿಐ(ಎಂ) ಬೈಂದೂರು ವಲಯ ಮುಖಂಡರಾದ ವೆಂಕಟೇಶಕೋಣಿ ಮಾತನಾಡಿ ಖಾಸಗಿ ಮತ್ತು ಸರಕಾರಿ ಬಸ್ಸುಗಳ ಮಾಲಕರು ಹಬ್ಬ ಹರಿದಿನಗಳಲ್ಲಿ ಮನಸ್ಸೊ-ಇಚ್ಚೆ ಜನರಿಂದ ಸಾವಿರಾರು ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ಬಸ್ಸು ಮಾಲಕರಿಗೆ ಯಾವುದೇ ಕಡಿವಾಣ ಇಲ್ಲದಂತಾಗಿದೆ. ಕ್ರಮ ಜರುಗಿಸಬೇಕಾದ ಜಿಲ್ಲಾಡಳಿತ ತಪ್ಪಗೆ ಮಲಗಿದೆ ಎಂದು ಆರೋಪಿಸಿದರು. ಸಿಪಿಐ(ಎಂ) ಮುಖಂಡರಾದ ಹೆಚ್. ನರಸಿಂಹ, ರಾಜೀವ ಪಡುಕೋಣೆ, ಶೀಲಾವತಿ, ನಾಗರತ್ನ ನಾಡ, ಶ್ರೀಧರ ಉಪ್ಪುಂದ, ಉಪಸ್ಥಿತರಿದ್ದರು.

Exit mobile version