Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಟ್ರಾಲ್ ಬೋಟ್ ಯೂನಿಯನ್ ಸಭೆ

ಗಂಗೊಳ್ಳಿ: ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಕಳೆದ ಮೂರ‍್ನಾಲ್ಕು ದಿನಗಳಿಂದ ಹೇರಳ ಮರಿ ಸಿಗಡಿ ದೊರೆಯುತ್ತಿರುವ ಹಿನ್ನಲೆಯಲ್ಲಿ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಸಭೆ ಸೇರಿದ ಗಂಗೊಳ್ಳಿ ವಲಯ ಟ್ರಾಲ್ ಬೋಟ್ ಯೂನಿಯನ್ ಪ್ರಮುಖರು ಈ ಬಗ್ಗೆ ಚರ್ಚೆ ನಡೆಸಿದರು.

ಗಂಗೊಳ್ಳಿ ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಜಿ.ಪುರುಷೋತ್ತಮ ಆರ್ಕಾಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೆಂಕಟೇಶ ನಡಹಳ್ಳಿ ಅವರು ಮೀನುಗಾರರಿಗೆ ಮಾಹಿತಿ ಮಾರ್ಗದರ್ಶನ ನೀಡಿ ಮಾತನಾಡಿದರು. ಕಳೆದ ಕೆಲವು ದಿನಗಳಿಂದ ಬಹಳಷ್ಟು ಸಣ್ಣ ಸಣ್ಣ ಸಿಗಡಿ ಮೀನುಗಾರರಿಗೆ ದೊರೆಯುತ್ತಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ಧಾರಣೆ ದೊರೆಯುತ್ತಿಲ್ಲ. ಹೀಗಾಗಿ ಈ ಸಂಬಂಧ ಸಿಗಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿ ಆ ಬಳಿಕ ಮೀನುಗಾರಿಕೆಗೆ ತೆರಳಲು ಟ್ರಾಲ್ ಬೋಟ್ ಮೀನುಗಾರರು ನಿರ್ಧರಿಸಿದ್ದಾರೆ. ಉಪಾಧ್ಯಕ್ಷ ವೈ.ಶ್ರೀನಿವಾಸ ಖಾರ್ವಿ, ಹಿರಿಯ ಮೀನುಗಾರ ಮುಖಂಡ ವಿಠೋಬ ಪಾಂಡು ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Exit mobile version