Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ದೇವಳದ ವ್ಯವಸ್ಥಾಪನಾ ಸಮಿತಿ ರಚನೆ, ಅಧ್ಯಕ್ಷರ ಅಧಿಕಾರ ಸ್ವೀಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಒಳಪಡುವ ಕಾರಣೀಕ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದರ್ಜೆಯ ದೇವಾಲಯಗಳಲ್ಲಿ ಒಂದಾಗಿದ್ದು, ಹಲವು ವರ್ಷಗಳ ಬಳಿಕ ಇದೀಗ, ನೂತನ ವ್ಯಪಸ್ಥಾಪನಾ ಸಮಿತಿ ರಚನೆಗೊಂಡಿದೆ.

ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ  ಎಸ್. ಸತೀಶ ಶೆಟ್ಟಿ ಚಮಟೆಹರ್ಲು ಸೋಮವಾರ ಅಧಿಕಾರ ಸ್ವೀಕರಿಸಿದರು. ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯರಾಗಿ  ದೇಗುಲದ ಪ್ರಧಾನ ಅರ್ಚಕ ಪ್ರಕಾಶ ಉಡುಪ, ರಾಮ ಎಸ್. ಉಪ್ಪುಂದ, ಲಲಿತಾ ಶೆಟ್ಟಿ, ಅಂಬಿಕಾ, ನಾರಾಯಣ ಖಾರ್ವಿ, ರಾಜೇಶ್ ದೇವಾಡಿಗ, ರವೀಂದ್ರ ಪ್ರಭು, ಜನಾರ್ಧನ ಮಾಚ ಪೂಜಾರಿ ನೇಮಕಗೊಂಡಿದ್ದಾರೆ.

ದೇವಳದ ಆಡಳಿತಾಕಾರಿ ಹಾಗೂ ತಹಶೀಲ್ದಾರ್ ಪ್ರದೀಪ ಕುಮಾರ ಅಧಿಕಾರಿ ಹಸ್ತಾಂತರಿಸಿದರು. ದೇವಾಲಯದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಉಪಸ್ಥಿತರಿದ್ದರು.

Exit mobile version