Kundapra.com ಕುಂದಾಪ್ರ ಡಾಟ್ ಕಾಂ

ಹಾಲಾಡಿ: ನಿರಂತರ ಮಳೆಗೆ ಕುಸಿದ ಭರಣಿಕೊಳ್ಳಿ ಸಂಪರ್ಕ ಸೇತುವೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹಾಲಾಡಿ ಸಮೀಪದ ಚೋರಾಡಿಯಲ್ಲಿ ಮಳೆ ನೀರಿನ ಅಬ್ಬರಕ್ಕೆ .ಹಾಲಾಡಿ ಮುದೂರು ಸಂಪರ್ಕಿಸುವ ಸೇತುವೆಯ ಸಂಪರ್ಕವೇ ಕಡಿದು ಹೋಗಿದೆ.

28 – ಹಾಲಾಡಿ ಗ್ರಾಮದ ಸೊಸೈಟಿಯಿಂದ ಹಾರ್ರಮಕ್ಕಿ ಮಾರ್ಗದ ಭರಣಿಕೊಳ್ಳಿಯ ಸೇತುವೆಯಾಗಿದ್ದು, ಈ ಭಾಗಕ್ಕೆ ಪ್ರಮುಖ ಸಂಪರ್ಕ ಮಾರ್ಗವಾಗಿತ್ತು. ಎರಡು ವರ್ಷದ ಹಿಂದೆ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು.ನೀರಿನ ರಭಸಕ್ಕೆ ಸೇತುವೆಯ ಬಳಿ ಸಂಪರ್ಕ ಸಂಪೂರ್ಣ ಕುಸಿದು ನೀರುಪಾಲಾಗಿದೆ. ಎರಡು ಭಾಗದ ಸಂಪರ್ಕ ಕಡಿತಗೊಂಡಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಪಂ ಸಿಇಓ ಪ್ರತೀಕ್‌ ಬಾಯಲ್‌, ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್, ತಹಶಿಲ್ದಾರ್‌ ಶೋಭಾಲಕ್ಷ್ಮೀ ಮೊದಲಾದವರು ಭೇಟಿ ನೀಡಿದ್ದಾರೆ.

Exit mobile version