Kundapra.com ಕುಂದಾಪ್ರ ಡಾಟ್ ಕಾಂ

ಸಿಎ ಫಲಿತಾಂಶ: ಕುಂದಾಪುರದ ಶಿಕ್ಷ ಪ್ರಭ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಮೇ 2023ರಲ್ಲಿ ನೆಡೆಸಿದ ಸಿಎ ಫೈನಲ್ ಮತ್ತು ಸಿಎ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ರಕ್ಷಿತ ಶೆಟ್ಟಿ (333), ನಿಕೋಲಾ ರೋಶನಿ ಡಯಾಸ್ (329) ಅಂಕಗಳೊಂದಿಗೆ ಸಿಎ ಅಂತಿಮ ಪರೀಕ್ಷೆಯ ಎರಡು ಹಂತದ ಪರೀಕ್ಷೆಯನ್ನು ತೇರ್ಗಡೆ ಹೊಂದುವುದರ ಮೂಲಕ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ.

ಆದಿತ್ಯ ಆರ್ ಶೆಟ್ಟಿ(194) ಅಂಕಗಳೊಂದಿಗೆ ಸಿಎ ಫೈನಲ್ ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಮಿತಾ ಶೇಟ್ 310 ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಎರಡು ಹಂತದ ಪರೀಕ್ಷೆಯನ್ನು ತೇರ್ಗಡೆ ಹೊಂದುವುದರ ಮೂಲಕ ಸಿಎ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಶ್ರದ್ಧಾ ಬಿ (161), ರಕ್ಷಿತಾ (148), ಪಂಚಮಿ ಕಿಣಿ (146), ಸಂಪ್ರೀತ (124), ಬಂಗೇರ ಶಾಂಭವಿ (120), ರಂಜನ್ ಶೆಟ್ಟಿ (118), ನಾದಶ್ರೀ (116), ಮನೋಜ್ (116), ರೋಹಿತ್ ಆಚಾರ್ಯ (110), ಶಯನ್ (105), ವೈಷ್ಣವಿ ವಿ ಮೋಪಗಾರ್ (103) ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಎರಡನೇ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುದರ ಮೂಲಕ ಸಿಎ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಸುಪ್ರೀತಾ (204), ನವೀನ್ (180), ಸುಹಾನ್ (177), ದೀಕ್ಷಯ್ (172), ವಿಘ್ನೇಶ್ ಎಸ್ ಬಿ (170), ವೈಷ್ಣವಿ ಪೆಜತ್ತಾಯ (156), ಕಾವ್ಯ ಡಿ (156), ಗುರುರಾಜ್ (155), ಮಹಿಮಾ (153), ಪ್ರೀತನ್ (151) ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಶಿಕ್ಷ ಪ್ರಭ  ಅಕಾಡೆಮಿಯು ಕಳೆದ ಕೆಲವು ವರ್ಷಗಳಿಂದ ಸಿಎ ಮತ್ತು  ಸಿಎಸ್  ಪ್ರೊಫೆಷನಲ್  ಕೋರ್ಸುಗಳಿಗೆ  ಗುಣಮಟ್ಟದ  ತರಬೇತಿ ನೀಡುತ್ತಾ ಬಂದಿದ್ದು ಅನೇಕ ವಿದ್ಯಾರ್ಥಿಗಳು ಸಿಎ/ಸಿಎಸ್ ನ ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ದೇಶದ ನಾನಾ ಭಾಗಗಳಲ್ಲಿ ಉದ್ಯೋಗದಲ್ಲಿದ್ದಾರೆ.

ಸಂಸ್ಥೆಯಲ್ಲಿ ಬೋಧಕ  ಸಿಬ್ಭಂದಿಗಳಾಗಿ ಆಗಮಿಸುವ ಅನುಭವಿ ಲೆಕ್ಕ ಪರಿಶೋಧಕರು, ತರಬೇತುದಾರರು, ವಿದ್ಯಾರ್ಥಿಗಳಿಗೆ ಗುಣಮಟ್ಟದ  ತರಬೇತಿ ನೀಡುವುದರ ಪರಿಣಾಮ ಪ್ರತಿ ಬ್ಯಾಚ್‌ನಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಬೋಧಕ ಸಿಬ್ಬಂಧಿ  ವರ್ಗದವರಿಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಮುಖ್ಯಸ್ಥರು ಅಭಿನಂದಿಸಿದ್ದಾರೆ.  

Exit mobile version