Kundapra.com ಕುಂದಾಪ್ರ ಡಾಟ್ ಕಾಂ

ಬೆಂಗಳೂರು ಮಂಗಳೂರು ರೈಲಿಗೆ ಹೊಂದಿಕೊಂಡು 3 ದಿನ ಮಡಗಾಂವ್ ಮಂಗಳೂರು ಮೆಮು ಲಿಂಕ್‌ ರೈಲು ಸೇವೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ: 
ಬೆಂಗಳೂರು – ಮಂಗಳೂರು – ಕಾರವಾರ ನಡುವೆ ಭೂಕುಸಿತ ಹಾಗೂ ಹಲವು ರಸ್ತೆಗಳು ಬಂದ್ ಆಗಿರುವ ಕಾರಣ ಸಾವಿರಾರು ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದು, ಅದಕ್ಕಾಗಿ ಬೆಂಗಳೂರು ಮಂಗಳೂರು ರೈಲಿಗೆ ಲಿಂಕ್‌ ಆಗಿ ಮಡಗಾಂವ್ ಮಂಗಳೂರು ಜಂಕ್ಷನ್ ಮಧ್ಯೆ ಮೂರು ದಿನಗಳ ವಿಶೇಷ ಲಿಂಕ್ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು ಮಂಗಳೂರು ರೈಲಿಗೆ ಮಡಗಾಂವ್ ಮಂಗಳೂರು ಜಂಕ್ಷನ್ ಮದ್ಯೆ ಮೂರು ದಿನಗಳ ವಿಶೇಷ ಲಿಂಕ್ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಡಗಾಂವ್ ಮಂಗಳೂರು ಜಂಕ್ಷನ್ ವಿಶೇಷ ಲಿಂಕ್‌ ರೈಲಿಗೆ ಉಡುಪಿ, ಬಾರ್ಕೂರು, ಕುಂದಾಪುರ, ಸೇನಾಪುರ, ಬಿಜೂರು, ಬೈಂದೂರು, ಶಿರೂರು, ಭಟ್ಕಳ, ಮುರುಡೇಶ್ವರ ಮೊದಲಾದ ಸ್ಟೇಷನ್‌ಗಳಲ್ಲಿ ನಿಲುಗಡೆ ಇರಲಿದೆ.

ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಇಂಜಿನ್ ಬದಲಾವಣೆ, ನೀರು ತುಂಬುವಿಕೆಯಂತ ವಿಳಂಭಧ ಕಾರಣದಿಂದ ಪ್ರತ್ಯೇಕ ಲಿಂಕ್ ರೈಲಿಗಾಗಿ ಮಾಡಲಾಗಿದ್ದ ಸಂಸದರ ಪತ್ರಕ್ಕೆ ರೈಲ್ವೇ ಸಚಿವಾಲಯ ಸ್ಪಂದಿಸಿದೆ. ಇದರಿಂದಾಗಿ ಬೆಂಗಳೂರು ಮಂಗಳೂರು ವಿಶೇಷ ರೈಲು ಬಂದ ಕೆಲವೇ ಹೊತ್ತಲ್ಲಿ ಲಿಂಕ್ ರೈಲು ಉಡುಪಿ ಕುಂದಾಪುರ ಬೈಂದೂರು ಮಾರ್ಗವಾಗಿ ಗೋವಾ ಕಡೆ ತೆರಳಲಿದೆ. ಗೋವಾದಿಂದ ಮಂಗಳೂರು ಸಂಪರ್ಕ ರೈಲು ಸೇವೆ ಆರಂಭಿಸಲು ರೈಲ್ವೇ ಇಲಾಖೆ ಅನುಮತಿ ನೀಡಿದೆ.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಮನವಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಪಂದಿಸಿದ್ದು, ಅವರು ರೈಲ್ವೇ ರಾಜ್ಯ ಸಚಿವ ಸೋಮಣ್ಣನವರ ಬಳಿ ತಕ್ಷಣಕ್ಕೆ ಲಿಂಕ್ ಸೇವೆಗಳ ಆರಂಭಕ್ಕೆ ತಿಳಿಸಿದರಲ್ಲದೇ, ಮಳೆಗಾಲದ ಸಮಸ್ಯೆ ಜಾಸ್ತಿ ಇರುವ ಅವಧಿಯಲ್ಲಿ ಬೆಂಗಳೂರು ಕಾರವಾರ ಮಧ್ಯೆ ಪಡೀಲ್ ಬೈಪಾಸ್ ಮಾರ್ಗದ ವಿಶೇಷ ರೈಲಿಗೆ ಬೇಡಿಕೆ ಇಟ್ಟಿದ್ದರು.

Exit mobile version