ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಇಲ್ಲಿನ ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ಅ.17-18ರಂದು ನಡೆಯಲಿರುವ ಕುಂದಾಪ್ರ ಕನ್ನಡ ಹಬ್ಬದ ಪೂರ್ವಭಾವಿ ಸಭೆ ಕರಾವಳಿ ಸಿರಿ ಕ್ಲಬ್ ಬೆಂಗಳೂರು ನೇತೃತ್ವದಲ್ಲಿ ಶೇಫ್ಟಾಕ್ ಸಂಸ್ಥೆಯ ನಾರಾಯಣಗುರು ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮ ದಿಬ್ಬಣ ತಯಾರಿ ಬಗ್ಗೆ ಚರ್ಚಿಸಿ ಸಲಹೆಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಇತ್ತಿಚಿಗೆ ನಿಧನರಾದ ಕರಾವಳಿಯ ಡಾ|ಸತೀಶ್ ಪೂಜಾರಿ, ಅಶ್ವಿನಿ ಶೆಟ್ಟಿ ಹಾಗೂ ರಮಾನಂದ ಶೆಟ್ಟಿ ಅವರಿಗೆ ನಮನ ಸಲ್ಲಿಸಲಾಯಿತು. ಡಾಕ್ಟರೆಟ್ ಪಡೆದ ದೀಪಕ್ ಶೆಟ್ಟಿ ಬಾರ್ಕೂರು ಅವರನ್ನ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶೇಫ್ಟಾಕ್ ಎಂಡಿ ಗೋವಿಂದ್ ಬಾಬು ಪೂಜಾರಿ, ಅಜಿತ್ ಶೆಟ್ಟಿ, ನರಸಿಂಹ ಬೀಜಾಡಿ ಮೊದಲಾದವರು ಇದ್ದರು.
ಕರಾವಳಿ ಸಿರಿ ಕ್ಲಬ್ನ ಚೇತನ್, ಸುಮಂತ್, ರಕ್ಷಿತ್ ಶೆಟ್ಟಿ, ಆರ್ಯ ಕೃಷ್ಣ, ವಸಂತ್ ಸಂಗಮ್, ಗುರುರಾಜ್ ಸಂಗಮ್, ರಾಜೇಶ್ ಹಳಗೇರಿ, ರಂಜಿತ್ ಗಾಣಿಗ, ನಿತಿನ್ ಬಿಲ್ಲವ, ರಾಜೇಶ್ ಚೊಮ್ಮಿ, ಅಜಿತ್ ಹಾಗೂ ಕರಾವಳಿ ಸಿರಿಯ ತಂಡದ ಸದಸ್ಯರು ಉಪಸ್ಥಿತರಿದ್ದರು.