Kundapra.com ಕುಂದಾಪ್ರ ಡಾಟ್ ಕಾಂ

ಉಪನ್ಯಾಸಕ ರವಿಚಂದ್ರ ಅವರಿಗೆ ಬೆಸ್ಟ್ ಟೀಚರ್ ಅವಾರ್ಡ್ ಪ್ರದಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಮಿಳುನಾಡಿನ ಸ್ಟಾರ್ ಇಂಟರ್ನ್ಯಾಷನಲ್ ಫೌಂಡೇಶನ್ ಫಾರ್ ರಿಸರ್ಚ್ ಆಂಡ್ ಎಜುಕೇಶನ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಸೇವೆಗಾಗಿ ಕೊಡಮಾಡುವ ಎಸ್.ಐ.ಎಫ್.ಆರ್.ಐ ಇಂಟರ್ನ್ಯಾಷನಲ್  ಬೆಸ್ಟ್ ಟೀಚರ್ ಅವಾರ್ಡ್- 2024ಕ್ಕೆ ಕೃಷ್ಣಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಸಮಾಜ ಶಾಸ್ತ್ರ ಉಪನ್ಯಾಸಕ ರವಿಚಂದ್ರ ಅವರು ಭಾಜನರಾಗಿದ್ದಾರೆ.

ಜುಲೈ 28 ರಂದು ಈರೋಡ್ ಕೊಹಿನೂರ್ ಹೊಟೇಲ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ರವಿಚಂದ್ರ ಅವರು ರೋವರ್ಸ್ ಘಟಕ ಹಾಗೂ ರೆಡ್ ಕ್ರಾಸ್ ಘಟಕದ ನೋಡೆಲ್ ಅಧಿಕಾರಿಯಾಗಿದ್ದು, ಭಾರತ್ ಸ್ಕೌಟ್ ಆಂಡ್ ಗೈಡ್ಸ್ ಗೆ ಸಂಬಂಧಿಸಿದಂತೆ ಅತ್ಯುತ್ತಮ ಹಂತವಾದ ಹಿಮಾಲಯನ್ ವುಡ್ ಬ್ಯಾಡ್ಜ್ ಪದವಿ ಹೊಂದಿದವರು.

ಕೋಟೇಶ್ವರ ಸಮೀಪದ ಮೂಡುಗೋಪಾಡಿಯವರಾದ ರವಿಚಂದ್ರ ಅವರು ಬಾಬು ಭಂಡಾರಿ ಮತ್ತು ಶಾರದಾ ಭಂಡಾರಿ ಅವರ ಪುತ್ರರಾಗಿದ್ದಾರೆ.

Exit mobile version