Site icon Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ನೂತನ ಆಂಬ್ಯುಲೆನ್ಸ್‌ಗೆ ಹಸಿರು ನಿಶಾನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕೊಲ್ಲೂರು ಪಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 2 ವರ್ಷಗಳಿಂದ ಆಂಬ್ಯುಲೆನ್ಸ್‌ ಸೇವೆ ಇಲ್ಲದ್ದರಿಂದ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದು, ಇದೀಗ ನೂತನ ಆಂಬ್ಯುಲೆನ್ಸ್‌ ಒದಗಿಸಲಾಗಿದೆ.

ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ನೂತನ ಅಂಬ್ಯುಲೆನ್ಸ್‌ ಹಸಿರು ನಿಶಾನೆ ತೋರುವ ಮೂಲಕ ಓಡಾಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಐ.ಪಿ.ಗಡಾದ್‌, ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ಕೇದ್ರದ ವೈದ್ಯಾಧಿಕಾರಿ ಡಾ. ಶೈಲೇಶ್‌, 108 ಉಡುಪಿ ಜಿಲ್ಲಾ ವ್ಯವಸ್ಥಾಪಕ ಮಹಾಬಲ, ಗ್ರಾಪಂ ಅಧ್ಯಕ್ಷೆ ವನಿತಾ, ಇಎಂಟಿ ನಾಗರಾಜ್‌, ರಾಘವೇಂದ್ರ, ಪೈಲೆಟ್‌ ಚಂದ್ರಪ್ಪ, ಪಿಐ ಬಸವರಾಜ್‌ ಪವಾರ್‌ ಉಪಸ್ಥಿತರಿದ್ದರು.

Exit mobile version