Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ವಲಯದ ಪ್ರಪ್ರಥಮ ಕಂಬಳ ಸಮಿತಿ ಉದ್ಪಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ

ಬೈಂದೂರು: ಕೃಷಿ ಕಾರ್ಯಗಳ ಯಾಂತ್ರೀಕರಣ ಹಾಗೂ ಹೈಕೋರ್ಟ್‌ನ ತಡೆಯಾಜ್ಞೆಯಿಯಿಂದಾಗಿ ಕೃಷಿಗೆ ಪೂರಕ ಕ್ರೀಡೆಯಾದ ಕಂಬಳಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿತ್ತು. ಆದರೆ ನೂರಾರು ವರ್ಷಗಳಿಂದ ಮುಂದುವರಿದು ಬಂದ ಕಂಬಳ ಕ್ರೀಡೆ ಮತ್ತೆ ತನ್ನ ಸಂಪ್ರದಾಯದೊಂದಿಗೆ ಹೊಸತನವನ್ನು ಕಂಡುಕೊಂಡಿದೆ ಎಂದು ಬೈಂದೂರು ವ್ಯ. ಸೇ. ಸ. ಸಂಘದ ಅಧ್ಯಕ್ಷ ತಗ್ಗರ್ಸೆ ನಾರಾಯಣ ಹೆಗ್ಡೆ ಹೇಳಿದರು.

ಅವರು ನಾವುಂದ ವೆಂಕಟರಮಣ ಗಾಣಿಗರ ಕಂಬಳಗದ್ದೆ ವಠಾರದಲ್ಲಿ ಬೈಂದೂರು ವಲಯ ಕಂಬಳ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಸಮಾರಂಭದಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ, ಮರವಂತೆ ಬಡಾಕೆರೆ ವ್ಯ. ಸೇ.ಸ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಬೈಂದೂರು ರೈತಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕಂಬಳ ಸಮಿತಿಯ ಉಪಾಧ್ಯಕ್ಷ ವೆಂಕಟರಮಣ ಗಾಣಿಗ, ರಾಮ ದೇವಾಡಿಗ ಉಪಸ್ಥಿತರಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಇದೇ ಸಂದರ್ಭದಲ್ಲಿ ಕಂಬಳದಲ್ಲಿ ಅನೇಕ ವರ್ಷಗಳ ಕಾಲ ತೊಡಗಿಸಿಕೊಂಡ ಸಂಜೀವ ಪೂಜಾರಿ ಗರಡಿಮನೆ ಹಾಗೂ ಬಾಬಣ್ಣ ನಾಯ್ಕ್ ಮಿಯಾರು ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಾವುಂದ ಜ್ಯೂನಿಯರ್ ಕಾಲೇಜಿನಿಂದ ಕಂಬಳಗದ್ದೆಯ ವರೆಗೆ ಕೋಣಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಸಮಿತಿಯ ಪ್ರದಾನ ಕಾರ್ಯದರ್ಶಿ ಆನಂದ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಸತ್ಯನಾ ಕೊಡೇರಿ ಕಾರ್ಯಕ್ರಮ ನಿರೂಪಿಸಿದರು.

Exit mobile version