Kundapra.com ಕುಂದಾಪ್ರ ಡಾಟ್ ಕಾಂ

ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ದಯಾನಂದ ಅವರ “ಬುದ್ಧನ ಕಿವಿ” ಕಥಾ ಸಂಕಲನ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಈ ವರ್ಷದ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಕತೆಗಾರ ದಯಾನಂದ ಅವರ “ಬುದ್ಧನ ಕಿವಿ” ಕಥಾ ಸಂಕಲನಕ್ಕೆ ದೊರೆತಿದೆ.

ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕರಾಗಿ ಕಾರ್ಯನಿರ್ವಸುತ್ತಿರುವ ಅವರು ಕತೆಗಳು ಈಗಾಗಲೇ ಅಪಾರ ಓದುಗರ ಪ್ರೀತಿ ಮತ್ತು ವಿಮರ್ಶಕರ ಮೆಚ್ಚುಗೆಗಳನ್ನು ಪಡೆದಿವೆ.

ಹಿರಿಯ ಲೇಖಕರಾದ ಎಚ್. ಆರ್.  ಸುಜಾತ, ಗೊರವರ ಟಿ. ಎಸ್. ಗದಗ ಮತ್ತು ಫಣಿರಾಜ್, ಉಡುಪಿ ಇವರು ನಿರ್ಣಾಯಕರಾಗಿ ಸಹಕರಿಸಿರುತ್ತಾರೆ.

ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ಹಾಗೂ ಬೆಳ್ಳಿಯ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಮುಂದಿನ ದಿನಗಳಲ್ಲಿ  ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಮಿತಿಯ ಪ್ರಕಟಣೆ ತಿಳಿಸಿದೆ.  

ದಯಾನಂದ ಅವರ ಪರಿಚಯ:
ದಯಾನಂದ ಅವರು ಹುಟ್ಟಿದ್ದು 1988ರ ಅಂಬೇಡ್ಕರ್ ಜಯಂತಿಯಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರು, ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ‘ಸಮಯ ಟಿವಿ’, ‘ಪ್ರಜಾವಾಣಿ’ ಮತ್ತು ‘ಸಮಾಚಾರ. ಕಾಂ’ ಸುದ್ದಿ ಸಂಸ್ಥೆಗಳಲ್ಲಿ ಒಂದು ದಶಕದ ಪತ್ರಿಕೋದ್ಯಮದ ಅನುಭವ. ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕ.

2005ರಲ್ಲಿ ಪ್ರಕಟಗೊಂಡ ನಾಟಕ ‘ಬಾಳಪರಂಣ. ಛಂದಪುಸ್ತಕ ಬಹುಮಾನ ಪಡೆದು 2017ರಲ್ಲಿ ಪ್ರಕಟಗೊಂಡ ಕಥಾ ಸಂಕಲನ ‘ದೇವರು ಕಚ್ಚಿದ ಸೇಬು’. ‘ಬುದ್ಧನ ಕಿವಿ’  ಇವರ ಎರಡನೇ ಕಥಾ ಸಂಕಲನ. ಇವರ ಕತೆಗಳಿಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ, ಗುಲರ‍್ಗಾ ವಿಶ್ವವಿದ್ಯಾಲಯದ ಚಿನ್ನದ‌ ಪದಕ, ಸಂಕ್ರಮಣ ಕಥಾ ಪುರಸ್ಕಾರ, ಪ್ರಜಾವಾಣಿ ದೀಪಾವಳಿ ಕಥಾಸ್ರ‍್ಧೆಯ ಬಹುಮಾನ, ಸಮಾಜಮುಖಿ ಕಥಾ ಪುರಸ್ಕಾರ, ಸ್ಟೋರಿಬ್ರೂಕ್- ಸಪ್ನ ಬುಕ್‌ ಹೌಸ್ ಕಥಾ ಬಹುಮಾನ ಲಭಿಸಿದೆ.

ಇವರ ಕತೆಗಳು ಎರಡು ಬಾರಿ ಟೊಟೊ ಸಾಹಿತ್ಯ ಪುರಸ್ಕಾರದ ಲಾಂಗ್‌ಲಿಸ್ಟ್‌ನಲ್ಲಿದ್ದವು. ಇವರ ಕತೆಯೊಂದು ವಿಜಯ ಕರ್ನಾಟಟಕ ಕಥಾಸ್ರ‍್ಧೆಯ ಶರ್ಟ್‍ಲಿಸ್ಟ್‍ನಲ್ಲಿತ್ತು. ‘ಬುದ್ಧನ ಕಿವಿ’ ಕಥಾ ಸಂಕಲನವು ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ, ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ವೀಣಾ ಶಾಂತೇಶ್ವರ ದತ್ತಿ ಪುರಸ್ಕಾರ, ವೀಚಿ ಯುವ ಸಾಹಿತ್ಯ ‌ಪ್ರಶಸ್ತಿಗೆ ಭಾಜನವಾಗಿದೆ.

Exit mobile version