Site icon Kundapra.com ಕುಂದಾಪ್ರ ಡಾಟ್ ಕಾಂ

ವಾರಾಹಿ ನದಿ ಪಾತ್ರದ ಜನ, ಜಾನುವಾರು ಸ್ಥಳಾಂತರಕ್ಕೆ ಸೂಚನೆ.  ಪ್ರವಾಹದ ಮುನ್ನೆಚ್ಚರಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಾರಾಹಿ ಯೋಜನೆಯ ಮಾನಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದೆ. ಆದುದರಿಂದ ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ವಾರಾಹಿ/ಹಾಲಾಡಿ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಅಭಿಯಂತರು ಸೂಚನೆ ನೀಡಿದ್ದಾರೆ.

ಸತತವಾಗಿ ಬೀಳುತ್ತಿರುವ ಮಳೆಯಿಂದ ಜಲಾಶಯದ ನೀರಿನ ಮಟ್ಟವು ಏಕ ಪ್ರಕಾರವಾಗಿ ಏರುತ್ತಿದೆ. ಮಾನಿ ಜಲಾಶಯದ ಗರಿಷ್ಟ ಮಟ್ಟವು 594.36 ಮೀಟರ್ ಆಗಿದೆ. ಆ.5ರಂದು ಬೆಳಗ್ಗೆ 8ಗಂಟೆಗೆ ಜಲಾಶಯದ ಮಟ್ಟವು 588.15 (ಶೇ.65.17) ಮೀಟರ್‌ಗಳಾಗಿರುತ್ತದೆ. ಈ ದಿನದ ಮಾನಿ ಜಲಾಶಯದ ಒಳಹರಿವು ಸುಮಾರು 3393 ಕ್ಯುಸೆಕ್ಸ್ ಆಗಿದೆ.

ಇದೇ ರೀತಿ ಜಲಾಶಯಕ್ಕೆ ಒಳಹರಿವು ಮುಂದುವರಿದಲ್ಲಿ ಜಲಾಶಯವು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ. ಮಾನಿ ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಹೆಚ್ಚಾದ ನೀರನ್ನು ಹೊರಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version