Kundapra.com ಕುಂದಾಪ್ರ ಡಾಟ್ ಕಾಂ

ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳ ಸಂರಕ್ಷಣೆಗಾಗಿ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ರಿ. ಬೈಂದೂರು ತಾಲೂಕು, ಅರಣ್ಯ ಇಲಾಖೆ ಕುಂದಾಪುರ ವಲಯ, ಕೊಲ್ಲೂರು ವಲಯದ ಮೆಕ್ಕೆ ಒಕ್ಕೂಟ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಮೆಕ್ಕೆ ದುಡ್ಡಿನಗುಳಿ ಅವರ ಸಹಯೋಗದಲ್ಲಿ ಮೆಕ್ಕೆ ಗ್ರಾಮದ ಬಸ್ರಿಬೇರು ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳ ಸಂರಕ್ಷಣೆಗಾಗಿ ವಿವಿಧ ಜಾತಿಯ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬೈಂದೂರು ತಾಲೂಕು ಯೋಜನಾಧಿಕಾರಿಗಳದ ಕೆ. ವಿನಾಯಕ ಪೈ. ಗೀಡ ನಾಟಿ ಮಾಡಿ  ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳ ಸಂರಕ್ಷಣೆಗಾಗಿ ಹಾಗೂ ಮಣ್ಣಿನ ಸವಕಳಿ ತಪ್ಪಿಸಲು, ಉತ್ತಮ ಗಾಳಿ, ಮಳೆ,  ಬೆಳೆಗಾಗಿ  ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಪ್ರಸ್ತುತ ವರ್ಷದಲ್ಲಿ ರಾಜ್ಯದಲ್ಲಿ ವೃಕ್ಷ ಬಂಧನ ಕಾರ್ಯಕ್ರಮದಡಿಯಲ್ಲಿ ದಶ ಲಕ್ಷ ಗಿಡಗಳನ್ನು ನಾಟಿ ಮಾಡುವ ಉದ್ದೇಶ ಹೊಂದಿದ್ದು, ಬೈಂದೂರು ತಾಲೂಕಿನಲ್ಲಿ ಐದು ಸಾವಿರ ಗಿಡಗಳನ್ನು ಈ ಬಾರಿ ನಾಟಿ ಮಾಡಲಾಗಿದೆ ಹಾಗೂ ಹಣ್ಣಿನ ಗಿಡಗಳನ್ನು ನಾಟಿ ಮಾಡಿರುವುದರಿಂದ ವನ್ಯ ಜೀವಿಗಳಿಗೆ ಆಹಾರ ಲಭಿಸಲಿದ್ದು, ಕಾಡು ಪ್ರಾಣಿಗಳು ನಾಡಿಗೆ  ಬರುವ ಹಾವಳಿಯನ್ನು ತಪ್ಪಿಸಬಹುದು ಎಂದು ಕಾರ್ಯಕ್ರಮವನ್ನು ಗಿಡ ನಾಟಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಅರಣ್ಯ ವಿಭಾಗ ಜಡ್ಕಲ್ ಅರಣ್ಯ ರಕ್ಷಕರಾದ ಗಂಗಾಧರ್‍ ಅವರು ಗೀಡಗಳ ಸಂರಕ್ಷಣೆ ಹಾಗೂ ಪೋಷಣೆ ನಮ್ಮ ಆಧ್ಯ ಕರ್ತವ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜನಾ ಜಾಗ್ರತಿ ವೇದಿಕೆ ಸದಸ್ಯರಾದ  ಮಹಾಬಲ ಪೂಜಾರಿ ಅವರು ಪರಿಸರ ಸಂರಕ್ಷಣೆ ಮಾಡುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಮಾಡಬೇಕು‌ಇಂದಿನ ಯುವ ಪೀಳಿಗೆಗೆ ಮುಂದಿನ ದಿನದಲ್ಲಿ ಪರಿಸರ ಸಂರಕ್ಷಿಸುವ ಕುರಿತು ತಿಳುವಳಿಕೆ ನೀಡುವ ಕೆಲಸ ಆಗಬೇಕು ಎಂದು ಶುಭ ಹಾರೈಸಿದರು.

ಕೊಲ್ಲೂರು ವಲಯದ ಅಧ್ಯಕ್ಷರು ರವೀಂದ್ರ ಶೆಟ್ಟಿ, ಮೆಕ್ಕೆ ಒಕ್ಕೂಟದ ಅಧ್ಯಕ್ಷ ಎಂ. ಜೆ. ಬೇಬಿ, ಅಜಮೀರ್ ವನ್ಯ ಜೀವಿ ವಿಭಾಗ ಮುದೂರು ಜಡ್ಕಲ್ ಗ್ರಾಂ. ಪಂ. ಸದಸ್ಯ ನಾಗೇಶ್ ನಾಯ್ಕ್, ಕೊಲ್ಲೂರು ವಲಯದ ಮೇಲ್ವಿಚಾರಕ ರಾಜು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಉಪಸ್ಥಿತರಿದ್ದರು. ಕೃಷಿ ಮೇಲ್ವಿಚಾರಕ ರಾಜು ಕಾರ್ಯಕ್ರಮ ನಿರ್ವಹಿಸಿದರು. ಸೇವಾಪ್ರತಿನಿಧಿ ರಾಮು ಶೆಟ್ಟಿ ವಂದನೆ ಗೈದರು.

Exit mobile version