Kundapra.com ಕುಂದಾಪ್ರ ಡಾಟ್ ಕಾಂ

ನ.9ರಂದು ಸಹನಾ ಕನ್ವೆನ್ಶನ್ ಸೆಂಟರ್ ಹಾಗೂ ಸಹನಾ ಆರ್ಕಿಟ್ ಹೋಟೆಲ್ ಲೋಕಾರ್ಪಣೆ

ಕುಂದಾಪುರ: ತಾಲೂಕಿನ ಅಂಕದಕಟ್ಟೆ ಸಹನಾ ಎಸ್ಟೇಟ್ ನಲ್ಲಿ ಪ್ರತಿಷ್ಠಿತ ಸಹನಾ ಗ್ರೂಫ್ ಅವರ ನೂತನ ಸಹನಾ ಸಭಾಭವನ ಹಾಗೂ ಸಹನಾ ಆರ್ಕಿಟ್ ಹೋಟೇಲ್ ಕಟ್ಟಡ ನ.9ರ ಸಂಜೆ 5ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸಭಾಭವನವನ್ನು ಉದ್ಘಾಟನೆಗೊಳಿಸಿದರೇ, ರಾಜ್ಯ ಪ್ರವಾಸೋದ್ಯಮ ಸಚಿವ ಆರ್. ವಿ. ದೇಶಪಾಂಡೆ ಹೋಟೆಲ್ ಲೋಕಾರ್ಪಣೆಗೊಳಿಸುವರು. ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ ನಾಮಫಲಕ ಅನಾವರಣಗೊಳಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರೇ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಯು.ಎ.ಇ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉದ್ಯಮಿ ಎಸ್. ಪ್ರಕಾಶ್ ಶೆಟ್ಟಿ, ಕಾರ್ಪೊರೇಶನ್ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಡಾ. ವಿ. ರಾಜೇಂದ್ರ ಪ್ರಸಾದ್, ಹಂಗ್ಲೂರು ಗೆಳೆಯರ ಬಳಗದ ಬಾಬು ಶೆಟ್ಟಿ ಉಪಸ್ಥಿತರಿರುವರು.

Sahana Convention centre and hotel Ankadakatte0

Exit mobile version